ಗುರು ರಾಘವೇ೦ದ್ರ ರಾಯಾ || ಪ ||
ಗುರುರಾಘವೇ೦ದ್ರತ್ವಚ್ಚರಣ ಭಜಿಸುವವರ ಭವ
ಶರಧಿ ದಾಟಿಸಿ ಇಹಪರಸೌಖ್ಯ ಕೊಡುವೆ – ಗುರು ರಾಘವೇ೦ದ್ರ || ಅ ||
ಎಲ್ಲ ಕಾಶಿ ಪ್ರಯಾಗ ಎಲ್ಲಿ ಗಯಾ ಸೇತುಮ
ತ್ತೆಲ್ಲಿ ವೆ೦ಕಟಗಿರಿ ಕ೦ಚಿಯಿ೦ದಾ
ಎಲ್ಲೆಲ್ಲಿ ದೇಶದವರೆಲ್ಲ ಜನರು ಬ೦
ದಿಲ್ಲೆ ಸೇವಿಸಲು ಫಲ ನಿಲ್ಲದಲೆ ಕೊಡುವೆ – ರಾಘವೇ೦ದ್ರಾ || ೧ ||
ಆವ ದೇಶದಲ್ಲಿ ಆವಾಸ ಮಾಡಿ ವೃ೦
ದಾವನದಿ ಮೆರೆವೆ ಭಕ್ತಾವಳಿಗಳಾ
ಆವಾವ ಯೊಗ್ಯತೆಯು ಆವರ್ಗೆ ಇಹುದು ತಿಳಿ
ದಾವಾವು ಗತಿಗಳನು ಕೊಡುವೆ – ಗುರು ರಾಘವೇ೦ದ್ರ || ೨ ||
ದ೦ಡಕಮ೦ಡಲವ ಕೊ೦ಡು ಪ೦ಡಿತರೆ೦ಬ
ಪು೦ಡರೀಕುದಯಮಾರ್ತಾ೦ಡನೆನಿಪ
ಚ೦ಡದುರ್ವಾದಿಮತ ಖ೦ಡಿಸಿ ಮೆರೆದು ಭೂ
ಮ೦ಡಲದಿ ರಘುಪತಿಯ ಕ೦ಡು ಭಜಿಪ ಗುರು ರಾಘವೇ೦ದ್ರ || ೩ ||
ಉರ್ಬ್ಬಿಯೊಳು ಬ೦ದಿಲ್ಲಿ ಸರ್ಬ್ಬಜನರುಗಳು ಫಲ
ಲಭ್ಯವಿಲ್ಲದೆ ಪೋಪನೊಬ್ಬನಿಲ್ಲಾ
ಹಬ್ಬಿ ಸದ್ಭಕ್ತಿಯಿ೦ದುಬ್ಬಿ ಸೇವಿಸಲು ಭವ
ದುಬ್ಬಳವ ದಾಟಿಸಿ ಸುಖಾಬ್ಧಿಯೊಳಗಿಡುವ – ಗುರು ರಾಘವೇ೦ದ್ರ || ೪ ||
ವನಿತೆ ಧನ ಮನೆ ತನಯರನು ಬಯಸಿ ಭಜಿಸುವ
ಜನರಿಗಾಕ್ಷಣದಿ ಸತ್ಫಲ ಕೊಡುವೆ
ಘನ ಅಭಿನವಜನಾರ್ಧನವಿಠ್ಠಲ ಯದುಪತಿಯನೆ
ನೆನೆದುಪಾಸನೆ ಮಾಳ್ಪನೆ ನಮ್ಮ ಗುರು ರಾಘವೇ೦ದ್ರ || ೫ ||
*********

No comments:
Post a Comment