..
kruti by Nidaguruki Jeevubai
ವಂದಿಪೆ ತವ ಪಾದಕೆ ಭವದ
ಬಂಧನ ಕಳೆವುದಕೆ ಪ
ಹಿಂದೆ ಮುಂದೆ ಎಂದೆಂದಿಗು ಎನ್ನಯ
ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ
ಅಪರಾಧಿಯು ಎಂದು ತಿಳಿದರು
ಗುಪಿತದಿ ಸಲಹುವದು
ಅಪಮೃತ್ಯುವು ಪರಿಹಾರಕೆ ನಿಮ್ಮಯ
ಉಪದೇಶದ ಮಂತ್ರವೆ ಪರಮೌಷಧಿ 1
ಕಾಯಕ್ಲೇಶದಿಂದ ಮನಸಿನ
ಹೇಯ ವ್ಯಥೆಗಳಿಂದ
ಕಾಯಜ ಪಿತನಂಘ್ರಿಯ ಸೇವಿಸದಲೆ
ಆಯಾಸದಿ ಮನ ಕಳವಳಗೊಳುತಿದೆ 2
ದೇಹದಿ ಬಾಂಧವರು ಅವರು
ಆರು ಮಂದಿ ಇಹರು
ಮಾಯಾ ಪಾಶಾದಿ ಬಂಧಕ ಪಡಿಸುತ
ಹಾಯಲೀಸರೊ ಹರಿ ಅಂಘ್ರಿಗಳಲಿ 3
ಆರಿಗುಸುರಲೇನು ಮಾಡಿದ
ಕಾಂiÀರ್iವು ಮುಂದಿನ್ನೂ
ಆನಂದಮಯ ವಿಠ್ಠಲದಾಸರ ಕೂಡಿ
ಆದರುಸುವುದಿನ್ನೂ ಮುನ್ನೂ4
ಕಮಲನಾಭ ವಿಠ್ಠಲನೊಲುಮೆಯು
ಸುಲಭದಿ ಪಡೆವುದಕೆ
ನಮಿಸಿ ತಂದೆ ವೆಂಕಟೇಶ ವಿಠ್ಠಲ ದಾ-
ಸರಿಗೆ ನಮಿಸಿ ಬೇಡಿ ಅನುದಿನ ಪ್ರಾರ್ಥಿಸುತ5
***