Showing posts with label ಪಾದ ನಂಬು ಮನವೇ ಶ್ರೀರಂಗಯ್ಯನ ಪಾದಾನಂಬು gurumahipati. Show all posts
Showing posts with label ಪಾದ ನಂಬು ಮನವೇ ಶ್ರೀರಂಗಯ್ಯನ ಪಾದಾನಂಬು gurumahipati. Show all posts

Wednesday, 1 September 2021

ಪಾದ ನಂಬು ಮನವೇ ಶ್ರೀರಂಗಯ್ಯನ ಪಾದಾನಂಬು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಪಾದಾನಂಬು ಮನವೇ|ಶ್ರೀರಂಗಯ್ಯನ| ಪಾದಾನಂಬು ಮನವೇ ವೇದಕಗೋಚರವಾದಾ ಪ 


ಹೆಜ್ಜೆಯರಡರೊಳು ಮೂಜಗವಡಗಿಸಿ| ನಿರ್ಜರ ನದಿಯ ಪಡೆದಾ 1 

ಬಿಸಜಾಸಖಾ-ತನುಜ ಎಸಿಯೇ ವಾಸು ಕೀಶರಾ| ವಾಸವ ಜನ ಕಾಯ್ದಾ2 

ಪಲವು ಕಾಲದಿ ಮುನಿ ಮುಳಿದ ಕಾರಣದಿಂದ ನೆಲದೊಳು ಶಿಲೆಯಾದ ಲಲನೆಯ ನುದ್ದರಿಸಿದ 3 

ಮದವೇರಿ ಕುರುರಾಯ ಮೊದಲೇ ತಾಏಳದಿರೆ| ಬುಧಜನ ನೋಡಲಾಗ ವದಗ ದುರುಳಿಸಿದಾ 4 

ಇಂದು ಧರಜರಕೈಯ್ಯಾ ಮದನೆಯನು ಕೊಳುವಾ| ತಂದೆ ಮಹಿಪತಿ ಸ್ವಾಮಿ ನಂದನ ಜೀವನವಾದಾ 5

****