by ಕನಕದಾಸ
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನು
ಎಲ್ಲವನುಂಡು ತೀರಿಸಬೇಕು ಹರಿಯೆ ಪ
ತಂದೆತಾಯಿ ಬಸಿರಿಂದ ಬಂದ ದಿನ ಮೊದಲಾಗಿಒಂದಿಷ್ಟು ಸುಖವನೆ ಕಾಣೆ ನಾ ಹರಿಯೆಬಂದುದನೆಲ್ಲವನುಂಡು ತೀರಿಸದೆ ಭ್ರಮೆಗೊಂಡ ಮೇಲೇನುಂಟು ಹಗೆಯ ಜೀವನವೆ1
ಎಮ್ಮರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬಹೆಮ್ಮೆ ನಿನಗೇತಕೊ ವ್ಯರ್ಥ ಜೀವನವೆಬ್ರಹ್ಮ ಪಣೆಯೊಳು ಬರೆದ ವಿಧಿಯು ತಪ್ಪುವುದುಂಟೆಸುಮ್ಮನೆ ಇರು ಕಂಡ್ಯ ಹಗೆಯ ಜೀವನವೆ2
ಅಂತರಂಗದಲೊಂದು ಅರ್ಥ ದೇಹದಲೊಂದುಚಿಂತೆಯಾತಕೆ ನಿನಗೆ ಪಂಚರೆದುರುಕಂತುಪಿತ ಕಾಗಿನೆಲೆಯಾದಿಕೇಶವರಾಯಅಂತರಂಗದಿ ನೆಲೆಗೊಳುವ ತನಕ3
*********