Showing posts with label ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ vijaya vittala. Show all posts
Showing posts with label ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ vijaya vittala. Show all posts

Wednesday, 16 October 2019

ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ ankita vijaya vittala

ವಿಜಯದಾಸ
ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ
ಭೂತಳದೊಳಜಾತನಾಗಿ ಮೆರೆವ ಪ

ಏಕಾರಾರ್ಣವದೊಳು ಎಲ್ಲರ ವೊಡಲೊಳು
ಸಾಕಿಕೊಳ್ಳುತ ಪೊಂದಲಿಟ್ಟುಕೊಂಡು
ಲೋಕನಾಯಕ ಹರಿವಟದೆಲಿಯ ಮೇಲೆ
ಮಾಕಾಂತಿಯ ಕೂಡ ಮಲಗಿದ ಗುಣನಿಧಿ 1

ಜಿನಮತದಲಿ ಪುಟ್ಟಿ ದಾನವರು ಸ
ಜ್ಜನಕರ್ಮ ಮಾಡುತಲಿರೆ ವೇಗಾ
ಅನಿಮಿಷರಾಡಿದ ಮಾತಿಗೆ ದೈತ್ಯನ
ಮನವಂಚಿಸಿ ಉಪದೇಶ ಮಾಡಿದ ಹರಿ2

ನಂದ ವ್ರಜದಲ್ಲಿ ಪೂತಿನಿ ಶಕಟನ್ನ
ಗಜ ಮಲ್ಲರ ಸವೆದು
ಅಂದವಾಗಿ ಮೆರೆದ ವಿಜಯವಿಠ್ಠಲರೇಯಅಂದು ದೇವಕಿ ಬಾಲಕನಾಗಿ ತೋರಿದಾ 3
*******