ರಾಗ : ಕೇದಾರಗೌಳ ಆದಿತಾಳ
ಶ್ರೀಗೋಪಾಲದಾಸರ ಕೃತಿ
ಶ್ರೀಹರಿಯ ಬಿಂಬ ದರ್ಶನವೇ ಮುಖ್ಯವೆಂಬ ವಿಷಯ
ನೀನಿದ್ದು ಎನಗೆ ಏನಾದಡೀಯೋ
ನೀನಲ್ಲದಾ ಸುಖವು ಏನಿತ್ತರೂ ಒಲ್ಲೆ॥ಪ॥
ನೀನಿಲ್ಲದಾ ತೀರ್ಥಕ್ಷೇತ್ರ ನೀವದಕಿಂತ
ನೀರಿಲ್ಲದ ಸ್ಥಳವು ಎನಗೆ ಲೇಸು
ನೀನಿಲ್ಲದಾ ಸಕಲ ಭೋಗ್ಯ ಭೋಗದಕಿಂತ
ನೀನಿದ್ದು ಅರಣ್ಯ ಚಲಿಸುವುದು ಮೇಲಯ್ಯಾ॥೧॥
ನಿನ್ನ ಸರಿ ಹೋಗದ ಪಟ್ಟಣಾದರು ಎನಗೆ
ಕಾನನ ಕಾಣಿಸುವದು ಕರುಣಾ ನಿಧಿಯೆ
ನಿನಗೆ ಸರಿಬಾರದಾ ಜ್ಞಾನಿಯಾದರೂ ಅವನು
ಶ್ವಾನನಾಕಿಂತ ಕಡೆವು ನಾನಯ್ಯ॥೨॥
ನೀನಿಲ್ಲದಾ ಸಕಲ ಮಂತ್ರ ಮಾಡುವದಕ್ಕಿಂತ
ನೀನಿದ್ದು ಏನರಿಯೇ ಎಂಬೋದೆ ಲೇಸು
ನೀನಿಲ್ಲದಾ ಸಕಲ ದಾನ ಮಾಡೋದಕಿಂತ
ನೀನಿದ್ದು ದೀನನೆಸುವದೆ ಲೇಸು ಎನಗೆ॥೩॥
ನೀನು ಅರಿಯದ ದೊದ್ಡ ರಾಯನಾಗೋದಕ್ಕಿಂತ
ನೀನು ಅರಿದಿಪ್ಪಂಥ ಶ್ವಪಚ ಮೇಲಯ್ಯಾ
ನೀನು ಕಾಣಿಸದೆ ತಾನು ಕಂಡೆನೆಂಬೊದಕ್ಕಿಂತ
ಜ್ಞಾನವಿಲ್ಲದ ದೊಡ್ಡ ಕೋಣ ಮೇಲಯ್ಯಾ॥೪॥
ಮಾಡಿಸು ಸಾಧನಾ ಮಾಡಿಸದಿರು ಎನಗೆ
ನೋಡೆ ಕೊಂಪೆ ಬಳಲಿರುವುದೆ ಲೇಸು
ರೂಡಿಗೊಡಿಯಾ ದೇವಾ ಗೋಪಾಲವಿಠಲ
ಬೇಡುವೆನೋ ನೀ ಸರ್ವದಾಡುಯನ್ನೊಡನೆ॥೫॥
****
https://drive.google.com/file/d/1z22m_DPYWKxQGpe93it6MeX40M5j964f/view?usp=drivesdk