Showing posts with label ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ramesha. Show all posts
Showing posts with label ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ramesha. Show all posts

Wednesday, 4 August 2021

ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ankita ramesha

ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ.

ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ 1

ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ 2

ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ 3

ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ 4

ಸುರತ ರಂಗಯ್ಯಗೆ ದೊರೆತನ ಕಡಿಮೆ ಏನ ತಿರುಕನ ಮಾಡಿ ಕಳುಹಿದಿ ಕೋಲತಿರುಕನಮಾಡಿ ಕಳುಹಿದಿಮಿತ್ರವಿಂದ ಕರ ಕರಿಯೆಂದು ಬಿಡಬೇಕು ಕೋಲ 5

ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ 6

ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ 7

ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ 8

ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ 9

ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ10

ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ 11

****