Showing posts with label ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ jayesha vittala. Show all posts
Showing posts with label ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ jayesha vittala. Show all posts

Thursday, 5 August 2021

ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ ankita jayesha vittala

 ..

ಲಕುಮಿ ಸಾಮ್ರಾಜ್ಯ ಶರಧಿಗಮೃತಾಂಶು ನೇತ್ರ ಪ


ಲಕುಮಿ ಮಾಂಗಲ್ಯ ಕಟ್ಟಿದನೆ ಜಗದೇಕ ಸೂತ್ರ ಅ.ಪ.


ನಿತ್ಯ ಕಲ್ಯಾಣ ಸಾಗರನೆ ಶಶ್ವದೇಕ

ಸತ್ಯ ಕಾರುಣ್ಯ ಸಿಂಧು ಕೊಡು ಭಕ್ತಿಪಾಕ

ಭಕ್ತವತ್ಸಲನೆ ಕೃಪಾಪೂರ್ಣಾವಲೋಕ

ದೈತ್ಯದಲ್ಲಣನೆ ದುರಿತ ತಿಮಿರಾರ್ಕ 1


ನಿರುತ ಪರಿಪೂರ್ಣ ಸೌಲಭ್ಯ ಸುಗುಣವನಧಿ

ನಿರವದ್ಯ ನಿತ್ಯ ಸ್ವಾನಂದ ಪೂರ್ಣ ಮೋದಿ

ಕರೆವ ಭಕ್ತರಾತುರಕೆ ಬರುವನವಸರದಿ

ಗರೆವ ಸರ್ವಾರ್ಥ ಸಲಹಿ ಶರಣರನು ಛಲದಿ 2


ವಿಮಲ ಲಾವಣ್ಯ ಶೃಂಗಾರ ಸಿಂಧುಕಾಯ

ಅಮಿತ ಉತ್ತಮ ಜಯೇಶವಿಠಲರಾಯ

ಕಮಲಭವ ವಾಯು ರುದ್ರಾದಿ ದೇವ ಧÉ್ಯೀಯ

ಅಮೃತಾತ್ಮ ದೇಹಿ ಅಮೃತ ಸೌಭಾಗ್ಯ ಸ್ವೀಯ 3

***