ನಡಿ ಬೇಗನೆ ಪೋಗೋಣ ವೃಂದಾವನ ಪ
ಪಾಡೋಣ ಯಶೋದೆಯ ಕಂದನ ಅ.ಪ.
ಎಲ್ಲ ಗೋಪೇರು ಮನಿಯಲ್ಲಿ ನಿಲ್ಲದೆ ಅವ-ನಲ್ಲಿ ನಿಂತಿಹರು ನೋಡೋಣ ನಡಿ 1
ಮುರಳಿಗಾನವ ಕೇಳಿ ಮರುಳಾಗಿದೆ ಮನಸ್ಥಿರವ ಪೊಂದದು ಬಿಡುಮೌನ ನಡಿ 2
ನಂದಸೂನು ಗಾನ ಇಂದು ಕೇಳುತ ಹೃದಯಸಂದಿಸಿಹುದು ಸ್ಮರ ಬಾಣ ನಡಿ 3
ಆರು ವಂದಿಸಲೇನು ಆರು ನಿಂದಿಸಲೇನು ನೀರಜಾಕ್ಷನ ನೋಡೋಣ ನಡಿ 4
ಇಂದಿರೇಶನ ಮುಖ ಮಂದಹಾಸವ ನೋಡಿನಂದುತಿಹುದು ಭವ ಧ್ಯಾನ ನಡಿ 5
****