Showing posts with label ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ gurumahipati. Show all posts
Showing posts with label ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ gurumahipati. Show all posts

Wednesday, 1 September 2021

ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ 


ಕುಂಡ ಗೋಳಕರರ ಸನ ಮನಿಯಲಿ ಜನ ಉಂಡ ವೆಂಜಲ ಬಳಿದು ಹಿಂಡ ರಾಯರ ಮುಂದ ಕುದುರೆಯ ತೊಳೆವುತ ಭಂಡಿಯ ಹೊಡೆವುತ ಪಾರ್ಥನವಶವಾಗಿ1 

ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು ನಿಲ್ಲದೇ ಮಾರ್ಗದಿ ಬರುತಿರಲು ಮುಳ್ಳು ಮುರಿಯವಳ ಕಾಲವ ಹಿಡಿವುತ ಸಂತೈಸಿ ಕಳುಹಿದ 2 

ಜಾರ ಚೋರನೆನಿಸಿ ನಿರುತ ಗೋವಳರುಂಡನ್ನ ಸವಿದು ಗುರುವರ ಮಹಿಪತಿ ಪ್ರಭು ಜನ್ಮರಹಿತನವ ತರಿಸಿ ಯಶೋಧೆಯ ಮೊಲೆ ಪಾಲವನುಂಡು3

****