ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ತನದ ಮಹಿಮೆಯಗಳೆದೇ ಅವಲೀಲೆಯೋ ನರನಾಗಿ ಗೋಪಾಲಕೃಷ್ಣಾ ಪ
ಕುಂಡ ಗೋಳಕರರ ಸನ ಮನಿಯಲಿ ಜನ ಉಂಡ ವೆಂಜಲ ಬಳಿದು ಹಿಂಡ ರಾಯರ ಮುಂದ ಕುದುರೆಯ ತೊಳೆವುತ ಭಂಡಿಯ ಹೊಡೆವುತ ಪಾರ್ಥನವಶವಾಗಿ1
ಗೊಲ್ಲತೆಯೊಬ್ಬಳು ನೀರಕೊಡುವ ಪೊತ್ತು ನಿಲ್ಲದೇ ಮಾರ್ಗದಿ ಬರುತಿರಲು ಮುಳ್ಳು ಮುರಿಯವಳ ಕಾಲವ ಹಿಡಿವುತ ಸಂತೈಸಿ ಕಳುಹಿದ 2
ಜಾರ ಚೋರನೆನಿಸಿ ನಿರುತ ಗೋವಳರುಂಡನ್ನ ಸವಿದು ಗುರುವರ ಮಹಿಪತಿ ಪ್ರಭು ಜನ್ಮರಹಿತನವ ತರಿಸಿ ಯಶೋಧೆಯ ಮೊಲೆ ಪಾಲವನುಂಡು3
****
No comments:
Post a Comment