Showing posts with label ಎನ್ನ ಸಲಹುದೋ ರಂಗಾ ಎನ್ನ ಸಲಹು ನಿನ್ನ ಚರಣ ಕಮಲ gurumahipati. Show all posts
Showing posts with label ಎನ್ನ ಸಲಹುದೋ ರಂಗಾ ಎನ್ನ ಸಲಹು ನಿನ್ನ ಚರಣ ಕಮಲ gurumahipati. Show all posts

Wednesday, 1 September 2021

ಎನ್ನ ಸಲಹುದೋ ರಂಗಾ ಎನ್ನ ಸಲಹು ನಿನ್ನ ಚರಣ ಕಮಲ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎನ್ನ ಸಲಹುದೋ ರಂಗಾ ಎನ್ನ ಸಲಹು| ನಿನ್ನ ಚರಣ ಕಮಲದೋರಿ| ಗಮನ ರಂಗಾ ಪ 


ನಷ್ಟ ಪರಮ ಪತಿತ ಗತಿಯ|ಗೆಟ್ಟು ಅಜಮಿಳ ತನ್ನ| ಕಷ್ಟ ಬಡುವ ಕಾಲದಲ್ಲಿ ಸುತನ ಪೆಸರನು| ಮುಟ್ಟಿ ಕರಿಯೇ ತೃಪ್ತನಾಗಿ|ಅಷ್ಟರಿಂದ ಅವಗ ನಿನ್ನ| ಪಟ್ಟಣಕ ನೀ ಅಟ್ಟಿ ಗತಿಯ|ಕೊಟ್ಟು ಸಲುಹಿದೆ ರಂಗಾ 1 

ಸಂಧಿಸಿ ಮಧ್ಯರಾತ್ರಿಯೊಳಗ|ಬಂದು ದೂರ್ವಾಸನ್ನವ ಬೇಡ| ಲಂದು ದೃಪದ ನಂದನೆ|ನಿನ್ನೆ ಸ್ಮರಿಸೆ ತ್ವರಿತದಿ| ಬಂದು ನಿಂದು ಬೇಡಿದುದನು|ಛಂದದಿಂದಲಿತ್ತು ದ್ವಿಜರಾಜ| ನಂದ ಬಿಡಿಸಿ ಐವರ ಮಾನ ಕುಂದಂತೆ ಕಾಯ್ದೆ ರಂಗಾ 2 

ಐದು ವರುಷ ಹಸುಮಗನಾ|ಬೈದು ಮಲತಾಯಿ ಪೊರಗೆ| ಹಾಕಲಾಗ ಧೃವನು ನಿನ್ನ ಕುರಿತು ಧ್ಯಾನವಾ| ಗೈಯ್ಯಲಾಗಿ ಅಚಲ ಪದಕ|ಒಯ್ದು ಇಟ್ಟು ನೀನು ಅವನ| ಕಾಯ್ದೆ ಮಹಿಪತಿ ನಂದನೊಡೆಯನಾದ ದೇವ ರಂಗಾ3

***