ಏನು ಗಳಿಸಿದ್ಯೊ ಪ್ರಾಣಿ ಜ್ಞಾನಕ ಮಾಡಿ ನೀ ಹಾನಿ ಪ
ಶಬ್ಧಜ್ಞಾನದ ಅಂಗಡಿನೀ ಹಾಕಿ ಲುಬ್ದಿಸಿದೊ ಬಲು ಪಾಕಿ ಲಬ್ದಾಲಬ್ಧಿಯು ತಿಳಿಯದೆ ಡೊಂಕಿ ಸ್ತಬ್ಧನಾದ್ಯೊ ವಿಶ ಸೋಂಕಿ 1 ವಿದ್ಯಾ ವ್ಯುತ್ಪತ್ತಿ ತೋರಿ ನೀ ಬಹಳ ಸದ್ಯಮಾಡಿದ್ಯೊ ತಾಳ ಮೇಳ ಸಿದ್ಧಾಂತನುಭವ ನೀ ಮಾಡಿ ಹಾಳ ಕೋಳ 2
ಗಳಿಸುವದೇನೆಂದರಿಯದೇ ಖೂನ ಬಾಳಿ ಬದುಕಿ ಪಡದೇನ ಬೆಳಗು ಬೀರುತಿರೆ ಮಹಿಪತಿ ಗುರುಜ್ಞಾನ ತಿಳಕೊಬಾರದೆ ನಿಜಖೂನ 3
***