ಚನ್ನಪಟ್ಟಣದ ಅಹೋಬಲದಾಸರು
ತುಳಸಿರಾಮದಾಸರು ದಯಮಾಡಬಾರದೇಕೊ ದಾಸನೊಳೆ ನೀ ಪ
ಭಯ ವೇನಿಹುದೊ ನಿನ್ನ ಭಜಕನಾದ ಮ್ಯಾಲೆ ದಯ ಸಾಕ್ಷಿಯೊಳು ಜಗತ್ರಯ ಪೂಜ್ಯವಂತ 1
ಸಾಧು ಶಿಖರನೆ ಬಾರೊ ಸಕಲಾಂತರವತೋರೊ ಪಾದ ಸೇವಕನು ನಾನಾದಮೇಲೆ ನಿಂತು ನೀ 2
ನಿತ್ಯೋತ್ಸವನೇ ದೇವಾ ನೀನೆ ಮಹಾನುಭಾವಾ ಪ್ರತ್ಯಕ್ಷಮಾದ ಮದ್ಗುರುವೇ ತುಲಸೀರಾಮಾ 3
***