Showing posts with label ಇನ್ನೇಕೆ ಯಮನ ಬಾಧೆಗಳು purandara vittala. Show all posts
Showing posts with label ಇನ್ನೇಕೆ ಯಮನ ಬಾಧೆಗಳು purandara vittala. Show all posts

Tuesday, 3 December 2019

ಇನ್ನೇಕೆ ಯಮನ ಬಾಧೆಗಳು purandara vittala

ಪುರಂದರದಾಸರು

ರಾಗ ಆನಂದಭೈರವಿ ಛಾಪುತಾಳ

ಇನ್ನೇಕೆ ಯಮನ ಭಾಧೆಗಳು , ಎನ್ನ
ಜಿಹ್ವೆಲಿ ಹರಿನಾಮಸ್ಮರಣೆ ಒಂದಿರಲು ||

ಪತಿತಪಾವನನೆಂಬೋ ನಾಮ , ಅತಿ
ಹಿತದಿಂದ ಮುನಿಗಳು ಸ್ತುತಿಸುವ ನಾಮ
ಕ್ರತುಕೋಟಿ ಫಲವೀವ ನಾಮ, ಸ-
ದ್ಗತಿಗೆ ಸಾಧನವಾಗುವ ಹರಿನಾಮ ||

ಮುನ್ನೊಬ್ಬ ಪ್ರಹ್ಲಾದ ಸಾಕ್ಷಿ, ಆ
ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ
ಚಿಣ್ಣನೆಂದಜಮಿಳ ಸಾಕ್ಷಿ, ನಿಜ-
ಪುಣ್ಯಲೋಕವನಾಳ್ವ ಧ್ರುವರಾಯ ಸಾಕ್ಷಿ ||

ಹದಿನಾಲ್ಕುಲೋಕವನಾಳ್ವ , ದಿವ್ಯ-
ಮದನಜನಕನಾಗಿ ಮುದದಿಂದ ಬಾಳ್ವ
ಪದುಮನಾಭನಾಗಿ ಇರುವ , ಗುರು
ಮಧ್ವೇಶ ಪುರಂದರವಿಟ್ಠಲ ಕಾಯ್ವ ||
***

pallavi

innEka yamana bAdhegaLu enna jihveli harinAma smaraNe vondiralu

caraNam 1

patita pAvananembo nAma ati hitadinda munigaLu stutisuva nAma
karadu kOTi phalavIva nAma sadgatige sAdhanavAguva harinAma

caraNam 2

munnoppa prahlAda sAkSi A kany shirOmaNI draupadi sAkSi
ciNNanenda ajAmiLa sAkSi nija puNya lOkanALva druvarAya sAkSi

caraNam 3

hadinAlku lOkavanALva divya madana janakanAgi mudadinda bALuva
padumanAbhanAgi iruva gurumada vEsha purandara viTTala kAiva
***

pallavi

inyAke yamana bAdhegaLu enna jihveli harinAma smaraNe ondiralu

caraNam 1

patita pAvananemba nAma ati hitadinda minigaLu stutisuva nAma
kratu kOTi balavIva nAma sadgatige sAdhanavAguva hari nAma

caraNam 2

munnobba prahlAda skSi akanyA shirOmaNi draupadi sAkSi
ciNNanendajamiLa sAkSi nija puNya lOkavanALva dharuvarAya sAkSi

caraNam 3

hadinAlgu lOkavanALva divya madanajanakanAgi mudadinda bALva
padumanAbhanAgi iruva guru madhvEsha purandara viTTala kAiva
***

ರಾಗ - : ತಾಳ -


ಇನ್ನೇಕೆ ಯಮನ ಬಾಧೆಗಳು ? l

ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ll ಪ ll


ಪತಿತ ಪಾವನನೆಂಬ ನಾಮ-ಸಕಲ l

ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ll

ಕ್ರುತುಕೋಟಿ ಫಲ ಒಂದೇ ನಾಮ-ಸದ್ l

ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ ll 1 ll


ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ l

ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ll

ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ l

ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ ll 2 ll


ಹದಿನಾಲ್ಕು ಲೋಕವಾಳುವ - ನಮ್ಮ l

ಮದನ ಜನಕನಾಗಿ ಮಹಿಮೆ ತೋರುವ ll

ಪದುಮನಾಭನಾಗಿ ಮೆರೆವ - ನಮ್ಮ l

ಪುರಂದರವಿಟ್ಠಲನ ಹರುಷದಿ ಕರೆವ ll 3 ll

***



ಇನ್ನೇಕೆ ಯಮನ ಬಾಧೆಗಳು? |
ಎನ್ನ ಜಿಹ್ವೆಯೊಳಗೆ ಹರಿನಾಮವಿರಲು ಪ

ಪತೀತ ಪಾವನನೆಂಬ ನಾಮ-ಸಕಲ |ಶ್ರುತಿತತಿಗಳಿಗೆಲ್ಲ ನಿಲುಕದೀ ನಾಮ ||ಕ್ರುತುಕೋಟಿ ಫಲ ಒಂದೇ ನಾಮ-ಸದ್ |ಗತಿಗೆ ಸಂಗಡ ಬಾಹೋದಲೆ ದಿವ್ಯನಾಮ1

ಮುನ್ನ ಪ್ರಹ್ಲಾದನೆ ಸಾಕ್ಷಿ - ನಮ್ಮ |ಕನ್ಯಾಶಿರೋಮಣಿ ದ್ರೌಪದಿ ಸಾಕ್ಷಿ ||ಚೆನ್ನ ಅಜಮಿಳನೊಬ್ಬ ಸಾಕ್ಷಿ ಆ |ಉನ್ನಂತ ಲೋಕವಾಳುವ ಧ್ರುವ ಸಾಕ್ಷಿ 2

ಹದಿನಾಲ್ಕು ಲೋಕವಾಳುವ - ನಮ್ಮ |ಮದನಜನಕನಾಗಿ ಮಹಿಮೆ ತೋರುವ ||ಪದುಮನಾಭನಾಗಿ ಮೆರೆವ- ನಮ್ಮ |ಪುರಂದರವಿಠಲನ ಹರುಷದಿ ಕರೆವ 3
******