Showing posts with label ಎಂಥಾ ದಯಾವಂತನು ಮಂತ್ರಾಲಯವಾಸನು suguna vittala. Show all posts
Showing posts with label ಎಂಥಾ ದಯಾವಂತನು ಮಂತ್ರಾಲಯವಾಸನು suguna vittala. Show all posts

Saturday, 28 December 2019

ಎಂಥಾ ದಯಾವಂತನು ಮಂತ್ರಾಲಯವಾಸನು ankita suguna vittala


ರಚನೆ......✍.....ಶ್ರೀಸುಗುಣವಿಠಲ


ಎಂಥಾದಯಾವಂತನು ಮಂತ್ರಾಲಯವಾಸನು||ಪ|| 
ನರಹರಿಯ ಪ್ರೀಯನೋ ರಾಘವೇಂದ್ರ ತೀರ್ಥನೋ||ಅ.ಪ.||

ಪ್ರಹ್ಲಾದರಾಜನೊ ನರಹರಿಯ ತೋರ್ಧನೋ|
ಬಾಹ್ಲೀಕರಾಜನೊ ಸದ್ಗುಣಾಸಾಂದ್ರನೋ|||೧|| 

ಸಿರಿಕೃಷ್ಣನ ದಾಸನೊ ಗ್ರಂಥನಿರ್ಮಾಣನೊ|
ಸಂಚಿತಾಗ್ರಪುಣ್ಯನೊ ಇವ ವ್ಯಾಸತೀರ್ಥನೊ||೨||

ಮೂಲರಾಮರ ಭಜಕನೊ ಮಧ್ವರಾ ಪ್ರೀಯನೊ|
ಮಂತ್ರಗೃಹದಿ ನಿಂತನೊ  ಶ್ರೇಷ್ಠಯತಿನಾಥನೊ||೩||

ಪ್ರೇತಘಾತಿಸಿ ಬಿಡೂವನೊ ಸಂತಸವಾ ಕೊಡುವನೊ|
ಕರೆದಲ್ಲಿಗೆ ಬರುವನೋ ಶಿಷ್ಟರಾ ಪೊರೆವನೊ||೪||

ಸೂತ್ರಭಾಷ್ಯ ರಚಿಸಿದನೊ ಪರಿಮಳವಾಹರಿಸಿದನೊ|
ಶ್ರೀಸುಗುಣವಿಠಲ ನ ದಾಸನೊ ರಾಘವೇಂದ್ರನೊ ರಾಘವೇಂದ್ರನೊ....||೫||.
***