ರಚನೆ......✍.....ಶ್ರೀಸುಗುಣವಿಠಲ
ಎಂಥಾದಯಾವಂತನು ಮಂತ್ರಾಲಯವಾಸನು||ಪ||
ನರಹರಿಯ ಪ್ರೀಯನೋ ರಾಘವೇಂದ್ರ ತೀರ್ಥನೋ||ಅ.ಪ.||
ಪ್ರಹ್ಲಾದರಾಜನೊ ನರಹರಿಯ ತೋರ್ಧನೋ|
ಬಾಹ್ಲೀಕರಾಜನೊ ಸದ್ಗುಣಾಸಾಂದ್ರನೋ|||೧||
ಸಿರಿಕೃಷ್ಣನ ದಾಸನೊ ಗ್ರಂಥನಿರ್ಮಾಣನೊ|
ಸಂಚಿತಾಗ್ರಪುಣ್ಯನೊ ಇವ ವ್ಯಾಸತೀರ್ಥನೊ||೨||
ಮೂಲರಾಮರ ಭಜಕನೊ ಮಧ್ವರಾ ಪ್ರೀಯನೊ|
ಮಂತ್ರಗೃಹದಿ ನಿಂತನೊ ಶ್ರೇಷ್ಠಯತಿನಾಥನೊ||೩||
ಪ್ರೇತಘಾತಿಸಿ ಬಿಡೂವನೊ ಸಂತಸವಾ ಕೊಡುವನೊ|
ಕರೆದಲ್ಲಿಗೆ ಬರುವನೋ ಶಿಷ್ಟರಾ ಪೊರೆವನೊ||೪||
ಸೂತ್ರಭಾಷ್ಯ ರಚಿಸಿದನೊ ಪರಿಮಳವಾಹರಿಸಿದನೊ|
ಶ್ರೀಸುಗುಣವಿಠಲ ನ ದಾಸನೊ ರಾಘವೇಂದ್ರನೊ ರಾಘವೇಂದ್ರನೊ....||೫||.
***
No comments:
Post a Comment