Saturday, 28 December 2019

ವಾಸುದೇವನ ಚರಣಕಮಲ ವಂದಕನೆ ankita gurupurandara vittala VAASUDEVANA CHARANA KAMALA VANDAKANE

 ರಾಗ ರೇವತಿ    ಆದಿತಾಳ 
1st Audio by Mrs. Nandini Sripad





ಶ್ರೀ ಗುರುಪುರಂದರವಿಠಲ ದಾಸರ ಕೃತಿ (son of purandaradasa)


ವಾಸುದೇವನ ಚರಣಕಮಲ ವಂದಕನೆ ಸ - ।
ನ್ಯಾಸ ಕುಲರತುನ ಗುರುವ್ಯಾಸಮುನಿರಾಯ ॥ ಪ ॥

ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ।
ವಾದಿಫಣಿಗರುಡ ತತ್ವಾದಿ ರಚಿತ ॥
ವಾದಿಭಯಂಕರನೆ ಪರವಾದಿ ಕೋಲಾಹಲನೆ ।
ವಾದಿಮಸ್ತಕ ಶೂಲ ಮಧುರ ಗುಣಶೀಲ ॥ 1 ॥

ವೈಷ್ಣವೋತ್ತಮ ಸದ್ವೈಷ್ಣವ ವ್ರಜಾನಂದ ।
ವೈಷ್ಣವಾಗಮಭರಿತ ವೈಷ್ಣವ ಪ್ರಿಯ ॥
ವೈಷ್ಣವ ಕಮಲ ಸೂರ್ಯ ವೈಷ್ಣವ ಕುಮುದ ಚಂದ್ರ ।
ವೈಷ್ಣವ ಕುಲೋತ್ಕೃಷ್ಟ ವಿಷ್ಣುಪರನೆಂದು ॥ 2 ॥

ಹರಿಯಲ್ಲದನ್ಯತ್ರ ಅರಿಯದ ಮಹಾಮಹಿಮ ।
ಹರಿಪಾದಯುಗಳ ಸರಸೀರುಹ ಭೃಂಗ ॥
 ಗುರುಪುರಂದರವಿಠಲ ಪರದೈವವೆಂದರುಹಿ । 
ಧರೆಯೊಳು ಸುಜನರ ಪೊರೆದೆ ಗುರುವ್ಯಾಸಮುನಿ ॥ 3 ॥
****

ರಾಗ ನಾಟ. ಅಟ ತಾಳ (raga, taala may differ in audio)

ವಾಸುದೇವನ ಚರಣವನಜ ವಂದಿಪನೆ , ಸಂ-
ನ್ಯಾಸ ರತ್ನಾಕರನೆ ವ್ಯಾಸಮುನಿರಾಯ

ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ-
ವಾದಿ ಫಣಿ ಗರುಡ ತತ್ವಾದಿರಚಿತ
ವಾದಿ ಭಯಂಕರ ದುರ್ವಾದಿ ಕೋಲಾಹಲ
ವಾದಿ ಮಸ್ತಕ ಶೂಲ ಮಧುರ ಗುಣಶೀಲ

ವೈಷ್ಣವೋತ್ತಮನೆ ಸದ್ವೈಷ್ಣವ ವ್ರಜಾನಂದ
ವೈಷ್ಣವಾಗಮ ಭರಿತ ವೈಷ್ಣವ ಸುಪ್ರೀತ
ವೈಷ್ಣವ ಕಮಲ ಸೂರ್ಯ ವೈಷ್ಣವ ಕುಮುದ ಚಂದ್ರ
ವೈಷ್ಣವ ಕುಲೋತ್ಕೃಷ್ಟ ವೈಷ್ಣವ ಶಿಷ್ಟ

ಹರಿಯಿಲ್ಲದ ಕ್ಷೇತ್ರವರಿಯದ ಮಹಾಮಹಿಮ
ಹರಿಕೃಷ್ಣಚರಣಸರಸೀರುಹಭೃಂಗ
ಗುರು ಪುರಂದರ ವಿಠಲನೆ ಪರದೈವವೆಂ-
ದರುಹಿ ಸುಜನರ ಪೊರೆವ ವ್ಯಾಸಮುನಿರಾಯ
***

pallavi

vAsudEvana caraNavanaja vandipane sanyAsa ratnAkarane vyAsamunirAya

caraNam 1

vAdigaja simha durvAdi mrga bhEruNDa mAyA vAdi phaNi garuDa tatvAdi racita
vAdi bhayankara durvAdi kOlAhala vAdi mastaka shUla madhura guNashIla

caraNam 2

vaiSNavOttamane sadvaiSNava vrajAnanda vaiSNavAgama barita vaiSNava su-prIta
vaiSNava kamala sUrya vaiSNava kumuda candra vaiSNava kulOtkrSTa vaiSNava shiSTa

caraNam 3

hariyillada kSEtravariyada mahAmahima hari krSNa caraNasara sIruha bhrnga
guru puranadara viTTalane paradaivavendaruhi sujanara poreva vyAsamunirAya
***

No comments:

Post a Comment