Showing posts with label ಹರಿಯ ಆಜ್ಞದಿಂದ vasudeva vittala ankita suladi ವರಾಹದೇವ ಸುಳಾದಿ HARIYA AAJNADINDA VARAHA DEVA SULADI. Show all posts
Showing posts with label ಹರಿಯ ಆಜ್ಞದಿಂದ vasudeva vittala ankita suladi ವರಾಹದೇವ ಸುಳಾದಿ HARIYA AAJNADINDA VARAHA DEVA SULADI. Show all posts

Tuesday 15 June 2021

ಹರಿಯ ಆಜ್ಞದಿಂದ vasudeva vittala ankita suladi ವರಾಹದೇವ ಸುಳಾದಿ HARIYA AAJNADINDA VARAHA DEVA SULADI

Audio by Mrs. Nandini Sripad


ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ  (ವಾಸುದೇವವಿಟ್ಠಲ ಅಂಕಿತ) 


 ವರಹದೇವರ ಸುಳಾದಿ 


 ರಾಗ ಕಲ್ಯಾಣಿ 


 ಧ್ರುವತಾಳ 


ಹರಿಯ ಆಜ್ಞದಿಂದ ಈರೇಳು ಲೋಕವ

ಸೃಜಿಸಿ ತಾ ಮನದಿಂದ ಕೆಲವು ಜನರುಗಳ

ಥರವಲ್ಲ ಇದರಿಂದ ತನುವಿಂದ ಸೃಜಿಸುವ ಜ -

ನರು ಬಹಳವಾಗಿ ಆಹರೆಂದು

ಹಿರಣ್ಯಗರ್ಭನು ಮನು ಮೊದಲಾದವರ ಸೃಜಿಸಿ

ವರ ಬಹು ಸಂತತಿಂದ ಜಗವ ಪೂರೈಸೆನ್ನ

ಧರಿಯು ನೀರೊಳು ಮುಣಗಿ ಪೋಯಿತೊ ನಾ ಹ್ಯಾಗೆ

ಸೃಜಿಸು ಬಗೆ ಎನ್ನೆ ಬ್ರಹ್ಮನು ಚಿಂತಿಸೆ

ವರಹ ರೂಪದಿ ನಾಸಾಪುಟದಿಂದ ಪುಟ್ಟಿದಂಥ

ಪರ ವಾಸುದೇವವಿಟ್ಠಲ ಪರಗತಿ ಎನಗೆ ॥ 1 ॥ 


 ಮಟ್ಟತಾಳ 


ಸುರರು ನೋಡಲು ನೋಡೆ ವರಗಿರಿ ಎಂತಾಗೆ

ತರಲು ಧರೆಯು ಪೋದ ನೀರೊಳು ಪಾತಾಳ

ಧರಿಯಲ್ಲಿ ಇದ್ದಂಥ ಧರೆಯನು ತರುತಿರಲು

ದುರುಳ ಹಿರಣ್ಯಾಕ್ಷ ಕರೆಕರೆ ಮಾಡಿದ್ದು

ಸರಕು ಮಾಡದೆ ದೇವ ಧರೆಯ ತಡೆಯಲಿದ್ದ

ತಿರುಗಿ ಎದುರಾಗಿ ದುರುಳನ ಶಿರವನ್ನು

ವರಿಸಿದ ಕೋರ್ದಾಡೆ ಕ್ಷುರದಿ ದಿತಿಜವೈರಿ

ವರ  ವಾಸುದೇವವಿಟ್ಠಲ ಪರನೆಂದು ಸಾರಿಕೊ ॥ 2 ॥ 


 ತ್ರಿವಿಡಿತಾಳ 


ನೀಟಾದ ಮೊನೆಯುಳ್ಳ ಸೆಟೆಯದಟಿತಗ್ರೀವ

ಹಾಟಕ ನಯನನ ರಕುತಯುಕುತ

ಮಾಟಾದ ದಾಡೇಲಿ ನೀರೊಳು ವಿಹರಿಸಿ

ಊಟಿ ನೀರನು ಮಾಡೆ ಮ್ಯಾಲುಗಳೆ ತೊಯಿದು

ಈಟಿ ಮೊನಿಗಳೆಮ್ಮ ತಗಲವೊ ಎಂತೆಂದು

ಕೂಟ ಕಟ್ಟಿದರ್ಜನ ಜನೋ ಲೋಕದಿ ಜನರು

ಆಟದಿ ಪುಚ್ಛವನು ನೆಗಹಿ ನೀರನು ಬಡದು

ಓಟ ಓಡುವ ರಭಸ ತಾಳದೆ ಜಲಧಿಯು

ಚಾಟೆಂದು ಲಯದ ಕೃಪೀಠಯೋನಿಯು ಬಂತು

ಮೂಟಿ ಕಟ್ಟಿಕೊಂಡು ಮೊರೆಯೊಕ್ಕ ಕಿಟಿಗೆ

ನೀಟಿಸಿ ಸಮಯವ ಕುಸುಮ ವೃಷ್ಟಿಗಳನ್ನು

ಪಾಟಿಸಿದರು ಸುರರು  ವಾಸುದೇವವಿಟ್ಠಲಂಗೆ ॥ 3 ॥ 


 ಅಟ್ಟತಾಳ 


ಕಿರಿ ಕಿರಿ ಕಿರಿ ಎಂದು ಧರೆಯ ಮೊಗವ ನೋಡಿ

ಅರಿದರ ಧರನಾಗಿ ಸುರರಿಗೆ ಅಭಯವ

ವರವ ಕೊಡುವೆನೆಂದು ಸ್ಥಿರವಾಗಿ ನಿಂತನ್ನ

ಚರಣ ಸಮೀಪಕ್ಕೆ ಸುರರು ಸುಖದಿ ಬಂದು ಪರಿಪರಿ ಕೊಂಡಾಡೆ 

ವರ ವಾಸುದೇವವಿಟ್ಠಲ ವೊಲಿವನಾಗೆ ॥ 4 ॥ 


 ಆದಿತಾಳ 


ಹಿರಣ್ಯಕ ನಯನನ ಮಶ್ರುಣ ಪೂಸಿದ ದಾಡೆ

ವರಸಿತೊ ಅಂಜುವೆ ಮುದ್ದಾಡಲಿ ಬೇಡ

ಪರಮ ಕೃಪೆಯಿಂದ ನೋಡಿದರೆ ಸಾಕೊ

ವರವೀವೊ ಎಂದರೆ ಧರೆಯ ನೋಡುವದ್ಯಾಕೆ

ವರವೀವೊ ಅವರೆಲ್ಲ ಸತಿಯ ಕೇಳುವರೇನೊ

ಧರೆಯು ನಗುತಾಳೆ ಕರದು ಬಿಡಸಲ್ಲ

ವರವೀಯೊ ವಾಸುದೇವವಿಟ್ಠಲ ಕೋಲಾ ॥ 5 ॥ 


 ಜತೆ 


ಮರಿಯದ್ಹಾಗೆ ಮಾಡೊ ವಾಸುದೇವವಿಟ್ಠಲ 

ಮೊರೆ ಇಡುವೆ ಇದೆ ಒಡೆಯ ಕೋಲಾ ॥

****