Showing posts with label ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ rangavittala RAKSHAMAAM RANGESHA RAVIKOTI SANKAASHA. Show all posts
Showing posts with label ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ rangavittala RAKSHAMAAM RANGESHA RAVIKOTI SANKAASHA. Show all posts

Wednesday, 11 December 2019

ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ankita rangavittala RAKSHAMAAM RANGESHA RAVIKOTI SANKAASHA

Audio by Mrs. Nandini Sripad

ಶ್ರೀ ಶ್ರೀಪಾದರಾಯರ ಕೃತಿ

 ರಾಗ ಸಾವೇರಿ        ಖಂಡಛಾಪುತಾಳ 

ರಕ್ಷಮಾಂ ರಂಗೇಶ ॥
ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶ ।
ಪಕ್ಷಿವಾಹನ ಶ್ರೀಶ ಭವ್ಯಗುಣಕೋಶ ॥ ಪ ॥
ಅಕ್ಷರಾದಿ ಪಿಪೀಲಿಕಾಂತ ಸಂರಕ್ಷಕಾಮಯ ಹರಣ ಸರ್ವ ಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ॥ ಅ ಪ ॥

ಕಮಲದಳ ನೇತ್ರ ಕಮಲಾರಿ ಸಮವಕ್ತ್ರ 
ಕಮಲವಿರಚಿತ ಸ್ತೋತ್ರ ಕರಧೃತ ಗೋತ್ರ 
ಕಮಲಜನುತಿ ಪಾತ್ರ ಕರಿರಾಜ ಯಾತ್ರ ॥
ಕಮಲಧರ ಕರಕಮಲ ಸಮಪದ 
ಕಮಲ ಸನ್ನಿಭ ವಿನುತ ಕಂಧರ 
ಕಮಲ ಸನ್ನಿಭ ಸುಗಾತ್ರ ಕಮಲಾ ಕಳತ್ರ ॥ 1 ॥

ಅನಿಮಿಷ ಸುಪ್ರೀತ ಅಖಿಳ ದೋಷ ನಿರ್ಧೂತ 
ಸನಕಾದಿ ಶೃತಿಗೀತ ಅರ್ಜುನ ಸೂತ 
ದಿನಮಣಿಕುಲಜಾತ ದೇವಕೀ ಪೋತ ॥
ಕನಕವಸನ ಕಿರೀಟಧರ ಕೋ-
ಕನದ ಹಿತ ಕಮಲಾಪ್ತ ನಯನ 
ವನದವಾಹನ ವೈರಿಕುಲಘಾತ ವನಜಭವತಾತ ॥ 2 ॥

ಅಂಗನಾಂಬರ ಹರಣ ಅನುಪಮ ಸಪ್ತಾವರಣ 
ಮಂಗಳಕರ ಚರಣ ಭಕ್ತಸಂರಕ್ಷಣ 
ಗಾಂಗೇಯ ಕೃತಸ್ಮರಣ ಕರುಣಾಭರಣ ॥
ರಂಗವಿಠಲ ಭುಜಂಗಶಯನ ಕು -
ರಂಗಧರ ಕಾವೇರಿ ತೀರ ಶ್ರೀ -
ರಂಗನಿಲಯ ತುರಂಗ ಸಂಚರಣ ಗಂಗಾಚರಣ ॥ 3 ॥
**********


ರಕ್ಷಮಾಂ ರಂಗೇಶ ಪ

ರಕ್ಷಮಾಂ ರಂಗೇಶ ರವಿಕೋಟಿ ಸಂಕಾಶಪಕ್ಷಿವಾಹನ ಶ್ರೀಶ ಭವ್ಯಗುಣಕೋಶಅಕ್ಷರಾದಿ ಪಿಪೀಲಿಕಾಂತ ಸಂ-ರಕ್ಷಕಾಮಯಹರಣ ಸರ್ವಲಕ್ಷಣ ಪರಿಪೂರ್ಣ ಪರಮೇಶ ದಕ್ಷಿಣಾಧೀಶ ಅ.ಪ.

ಕಮಲದಳ ನೇತ್ರ ಕಮಲಾರಿ ಸಮವಕ್ತ್ರಕಮಲಾವಿರಚಿತ ಸ್ತೋತ್ರ ಕರಧೃತ ಗೋತ್ರಕಮಲಜ ನುತಿಪಾತ್ರ ಕರಿರಾಜಯಾತ್ರಕಮಲಧರ ಕರಕಮಲ ಸಮಪದಕಮಲ ಸಂನಿಭವಿನುತ ಕಂಧರಕಮಲ ಸಂನಿಭ ಸುಗಾತ್ರ-ಕಮಲಾಕಳತ್ರ 1

ಅನಿಮಿಷ ಸುಪ್ರೀತಾಖಿಳ ದೋಷ ನಿರ್ಧೂತಸನಕಾದಿ ಶೃತಿಗೀತ ಅರ್ಜುನಸೂತದಿನಮಣಿಕುಲಜಾತ ದೇವಕೀ ಪೋತಕನಕವಸನ ಕೀರೀಟಧರ ಕೋ-ಕನದ ಹಿತ ಕಮಲಾಪ್ತ ನಯನವನದವಾಹನವೈರಿಕುಲಘಾತ ವನಜಭವ ತಾತ2

ಅಂಗನಾಂಬರಹರಣಾನುಪಮ ಸಪ್ತಾವರಣಮಂಗಳ ಕರಚರಣ ಭಕ್ತ ಸಂರಕ್ಷಣಗಾಂಗೇಯಕೃತಸ್ಮರಣ ಕರುಣಾಭರಣರಂಗವಿಠಲ ಭುಜಂಗಶಯನ ತು-ರಂಗಧರ ಕಾವೇರಿ ತೀರ ಶ್ರೀ-ರಂಗನಿಲಯ ತುರಂಗ ಸಂಚರಣ-ಗಂಗಾಚರಣ3
*********