Showing posts with label ಶರಣು ಶರಣು ರತಿನಾಥಾ pranesha vittala. Show all posts
Showing posts with label ಶರಣು ಶರಣು ರತಿನಾಥಾ pranesha vittala. Show all posts

Sunday, 17 November 2019

ಶರಣು ಶರಣು ರತಿನಾಥಾ ankita pranesha vittala

ಶರಣು ಶರಣು ರತಿನಾಥಾ ।
ಸುರವರ ಅನಿರುದ್ಧನ ತಾತಾ ।
ಕರುಣಾ ಪಯೋನಿಧಿ ರುಗ್ಮಿಣೀ ಜಾತಾ ।। ಪ ।।

ತ್ವರದಿಂ ಲಾಲಿಸು ಮಾತಾ ।
ಭರತನೆ ಸನತ್ಕುಮಾರಾ ।
ಸುದರುಶನ ಪರಮೋದಾರಾ ।।
ಹರನಂದನ ನತ ಬಂದು ಕುಮಾರಾ ।
ಕರ ಪಿಡಿ ಕೃಷ್ಣ ಕುಮಾರಾ ।। 1।।

ಗುರು ಮೊರೆ ಇಡಲೈತಂದೂ । ದಿವಿ ।
ಜರರಿಗೆ ಮನಸಿಗೆ ತಂದೂ ।
ತರುಣಿಯ ಬಿನ್ನಪ ಶಿವನಲ್ಲಿ ಬಂದು ।
ಶರೀರವ ಕರಗಿಸಿದೆಂದೂ ।। ಚರಣ ।।

ಮೀನಿನ ಬಸರೊಳು ಪೊಕ್ಕೆ ।
ಆ ಮಾನವರ ಕೈಗೆ ಸಿಕ್ಕೆ ।
ದಾನವನನ್ನು ಬಿಸುಟಿದೆ ಕುಕ್ಕೆ ।
ಆ ನೊರಣಿಸಲಿಕ್ಕಿದು ಶಕ್ಕೆ ।। 2 ।।

ಭುವನದ ಅಶೋಕ ಚೂತಾ ।
ನವ ಮಲ್ಲಿಕುತ್ಪಲ ಧರಿತಾ ।
ಪವನ ಉಡುಗಣಪ ವಸಂತ ಮಿಳಿತಾ ।
ಸುವಿಶಾಲ ಅದ್ಭುತ ಚರಿತಾ ।। 3 ।।

ಅಕಳಂಕನಂಗ ಮಾರಾ ।
ಮಕರ ಧ್ವಜ ಶುಕದೇರಾ ।
ಅಕುಟಿಲ ಪ್ರಾಣೇಶವಿಠಲನುದಾರಾ ।
ಸುಕಥೆ ಅರುಪು ಗಂಭೀರಾ ।। ಚರಣ ।।
*******