Showing posts with label ಭಾರತೀ ರಮಣ ಸದ್ಭಕ್ತ ಬಂಧೋ jagannatha vittala. Show all posts
Showing posts with label ಭಾರತೀ ರಮಣ ಸದ್ಭಕ್ತ ಬಂಧೋ jagannatha vittala. Show all posts

Saturday, 14 December 2019

ಭಾರತೀ ರಮಣ ಸದ್ಭಕ್ತ ಬಂಧೋ ankita jagannatha vittala

ಜಗನ್ನಾಥದಾಸರು
ಭಾರತೀರಮಣ ಸದ್ಭಕ್ತ ಬಂಧೋ
ಭವ ಭಯ ಪರಾಭವಗೈಸು ಬೇಗ ಪ

ಲೋಕಾಂತರಾತ್ಮಕನೆ ಈ ಕಮಲಜಾಂಡದೊಳು
ನೀಕೈಯ ಪಿಡಿದು ಕೃಪಾವಲೋಕನದಿಂದ
ಜೋಕೆ ಮಾಡುವುದೆನ್ನ ಮೈನಾಕಿವರಜನಕ 1

ಅನಿಲ ಎನ್ನವಗುಣಗಳೆಣಿಸಲು ಕಡೆಯುಂಟೆ
ಕೊನೆಗೆ ನೀನೆ ಗತಿಯೋ ಅನಿಮಿಷೇಶಾ
ಜನನಿ ಜನಕ ಭ್ರಾತ ಜನಪ ಗುರುವರ ಮಿತ್ರ
ಎನಗೆ ನೀ ಸಕಲ ಸೌಖ್ಯದನೆಂದು ಪ್ರಾರ್ಥಿಸಿದೆ 2

ಹನುಮ ಭೀಮಾನಂದ ಮುನಿರಾಯ ನಿನ್ನ ಪ್ರಾ
ರ್ಥನೆ ಗೈಯುವರು ವಾಣಿ ಫಣಿಪ ಮೃಡರು
ಅನಿಮಿತ್ತ ಬಾಂಧವ ಶ್ರೀ ಜಗನ್ನಾಥ ವಿಠ್ಠಲನ
ತನಯ ತಾವಕರ ಬಂಧನವ ಮೋಚನ ಮಾಡೋ 3
*********