Showing posts with label ಮಣಿಮಂತ್ರೌಷಧವೆಂಬ ಭ್ರಾಂತಿಯಲಿ others. Show all posts
Showing posts with label ಮಣಿಮಂತ್ರೌಷಧವೆಂಬ ಭ್ರಾಂತಿಯಲಿ others. Show all posts

Friday, 27 December 2019

ಮಣಿಮಂತ್ರೌಷಧವೆಂಬ ಭ್ರಾಂತಿಯಲಿ others

by ಗೋಪಾಲಾರ್ಯರು
ಮಣಿಮಂತ್ರೌಷಧವೆಂಬ ಭ್ರಾಂತಿಯಲಿಮಾಯಾಮೋಹದೊಳ್ ಸಿಕ್ಕಿ ತಾಮಣಿಮಾದ್ಯಷ್ಟ ವಿಭೂತಿಯೆಂಬಯ ಸುಜ್ಞಾನಾಂಧರಾಗೆಲ್ಲಿಯುಂಎಣೆಯಾರಿಲ್ಲೆಮಗೆಂದು ಮೋಹಿಸುವ ಈ ಮೂಢಾತ್ಮರಂ ಬೇಗದಿಂಗುಣಮೂರೊಂದಕೊುದು ಪಾಲಿಸುಗೆ ಗೋಪಾಲ ಸಚ್ಚಿದಾನಂದಮಂಮತಿಹೀನನಾಗದಿರೊ ಓ ಜೀವಾಮತಿಹೀನನಾಗದಿರೊ ಪ

ಸುತರ ತನುಧನಗಳ ಹಿತವೆಂದು ನಂಬಿ ನೀ ಅ.ಪ

ಶೃತಿ ಮತಗಳ ಬಿಟ್ಟು ಪ್ರತಿದಿನ ವಿಷಯವೆಗತಿಯೆಂದು ನೆಚ್ಚದಿರೊ ರಾಗದ್ವೇಷಯುತರ ನೀ ಮೆಚ್ಚದಿರೊ ನಿನ್ನ ತೋರದವ್ರತದಿಂದ ಹೆಚ್ಚದಿರೊ ಓ ಜೀವಾ 1

ಪರಿಭವವ ಮಾಡುವ ಪರಸೇವೆಗೆಳಸುವಸಿರಿಯ ನೀ ಬೇಡದಿರೊ ಕಾಮುಕನಾಗಿಪರಸತಿಯ ನೋಡದಿರೊ ಮುಂದುಗೆಡಿಪಪರಧರ್ಮವ ಕೂಡದಿರೊ ಓ ಜೀವಾ 2

ಧೈರ್ಯವಿಲ್ಲದೆ ನಿನ್ನೊಳಾರ್ಯ ಸಂಗವ ಬಿಟ್ಟುಕಾರ್ಯದೊಳ್ಬೆರೆಯದಿರೊ ಮನದಿಮಾತ್ಸರ್ಯದೊಳ್ ಕೊರೆಯದಿರೊ ಶ್ರೀ ಗೋಪಾಲಾರ್ಯನ ಮರೆಯದಿರೊ ಓ ಜೀವಾ 3
*******