Showing posts with label ಫಲಹಾರವನೆ ಮಾಡೋ ಪರಮಪುರುಷನೆ ಲಲನೆ purandara vittala PHALAHAARAVA MAADO PARAMAPURUSHANE LALANE. Show all posts
Showing posts with label ಫಲಹಾರವನೆ ಮಾಡೋ ಪರಮಪುರುಷನೆ ಲಲನೆ purandara vittala PHALAHAARAVA MAADO PARAMAPURUSHANE LALANE. Show all posts

Thursday, 2 December 2021

ಫಲಹಾರವನೆ ಮಾಡೋ ಪರಮಪುರುಷನೆ ಲಲನೆ purandara vittala PHALAHAARAVA MAADO PARAMAPURUSHANE LALANE

sung as hayavadana ankita


CHECK similar song in Purandara Vittala ankita

ಫಲಹಾರವನೆ ಮಾಡೋ ಪರಮಪುರುಷನೆ
ಲಲನೆ ಲಕ್ಷ್ಮೀ ಸಹ ಸಕಲಸುರರೊಡೆಯ ||

ಕಬ್ಬು ಕದಳಿಫಲ ಕೊಬ್ಬರಿ ಖರ್ಜೂರ

ಕೊಬ್ಬಿದ ದ್ರಾಕ್ಷಿ ಹಲಸು ತೆಂಗು
ಶುಭ್ರ ಸಕ್ಕರೆ ಲಿಂಬೆ ಮಾವು ಕಿತ್ತಳೆಗಳು
ಇಬ್ಬದಿಯಲಿ ಇಟ್ಟ ಶೇಷಫಲಂಗಳು ||

ನೆನೆಗಡಲೆ ಬೇಳೆ ಲಡಿಗೆ ಮೂಗದಾಳು*

ಪಾನಕ ಶುಂಠಿ ಬೆಲ್ಲ ಯಾಲಕ್ಕಿಯು
ಗೊನೆಬಾಳೆಹಣ್ಣು ಘೃತವು ನೊರೆಹಾಲು
ಕನಕಪಾತ್ರೆಯೊಳಿಟ್ಟು ಸಕಲಪದಾರ್ಥವ ||

ಧ್ಯಾನಪೂರ್ವಕದಿಂದ ಮಾನಸಪೂಜೆಯ

ಪನ್ನೀರನೆ ಭಕುತವತ್ಸಲನೆ
ಜಾನಕಿರಮಣಗೆ ಷೋಡಶೋಪಚಾರ
ದಾನವಾಂತಕ ಸಿರಿ ಪುರಂದರವಿಠಲ ||
***


Palaharavane mado paramapurushane
Lalane lakshmi saha sakalasurarodeya ||

Kabbu kadalipala kobbari karjura
Kobbida drakshi halasu tengu
Subra sakkare limbe mavu kittalegalu
Ibbadiyali itta seshapalangalu ||

Nenegadale bele ladige mugadalu*
Panaka sunthi bella yalakkiyu
Gonebalehannu grutavu norehalu
Kanakapatreyolittu sakalapadarthava ||

Dhyanapurvakadinda manasapujeya
Pannirane Bakutavatsalane
Janakiramanage shodasopacara
Danavantaka siri purandaravithala ||
***

ಪುರಂದರದಾಸರು
ಫಲಾಹಾರವನು ಮಾಡೊ ಪರಮಪುರುಷ ಭೂಲಲನೆಲಕ್ಷ್ಮೀ ಕಂದರ್ಪರ ಸಹಿತಪ.

ಕದಳಿ ಕೆಂಬಾಳೆ ಕಿತ್ತಳೆ ಕಂಚಿ ಫಲಗಳುಬದರಿ ಬೆಳುವಲ ಜಂಬೀರ ದ್ರಾಕ್ಷಿಗಳು ||ಮಧುರದ ಮಾದಾಳ ಮಾವಿನ ಹಣ್ಗಳುತುದಿ ಮೊದಲಿಲ್ಲದ ಪರಿಪರಿ ಫಲಗಳ 1

ಉತ್ತತಿ ಜಂಬುನಾರಂಗ ದಾಳಿಂಬವುಮುತ್ತಾದೌದುಂಬರ ಕಾರಿಯು ಕವಳಿ ||ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ 2

ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯುಹಾಲು ರಸಾಯನ ಬೆಣ್ಣೆ ಸೀಯಾಳು ||ಮೂಲೋಕದೊಡೆಯ ಶ್ರೀ ಪುರಂದರವಿಠಲನೆಪಾಲಿಸೋ ನಿನ್ನಯ ಕರಕಂಜದಿಂದಲಿ 3
***

pallavi

phalahAravanu mADo parama puruSa bhUlalane lakSmI kandarpa sahita

caraNam 1

kadaLi kembALe kittaLe kanji phalagaLu badari beLuvala jambIra drAkSEgaLu
madhurada mAdALa mAvina haNgaLu tudi modalillada paripari phalagaLa

caraNam 2

uttatti jambu nranga dALimbavu muttA dautumbara kAriyu kavaLi
kattarisida kabbu palasu tenginakAyi ottida bELe nelagaDale kharjUra haNNa

caraNam 3

hAlu sallare jEnutuppa sIkaraNiyu hAlu rasAyana beNNe sIyALu
mUlOkadoDeya shrI purandara viTTalane pAlisO ninnaya karakanjadindali
***