Showing posts with label ಳಳ- RSS- ಹರಸಿ ಧರೆಗವತರಿಸಿದೋ others HARASI DHAREGAVATARISIDO rss. Show all posts
Showing posts with label ಳಳ- RSS- ಹರಸಿ ಧರೆಗವತರಿಸಿದೋ others HARASI DHAREGAVATARISIDO rss. Show all posts

Friday, 24 December 2021

ಹರಸಿ ಧರೆಗವತರಿಸಿದೋ others HARASI DHAREGAVATARISIDO rss

   


RSS song .

ಹರಸಿ ಧರೆಗವತರಿಸಿದೋ ಸಿಡಿಲಾಳು ಮಾನವ ಕೇಶವ

ಆಳು ಶ್ವಾಸವನಾಳು ಹೃದಯವ ಸ್ಪರ್ಶಿಸಿದೊ ಸರ್ವಸ್ವವ ||ಪ||


ಕಲಿಬಲೋನ್ನತ ನೆಲದ ಯುವಕುಲವಿರಲು ದಾರಿಯೆ ತೋರದೆ

ಧ್ಯೇಯದೇಗುಲ ತೆರೆದು ಬಾಗಿಲ ಕರೆದ ಕರದೊಳು ಹರಿದಿದೆ

ನಿನ್ನ ಜೀವನದಮರ ಧಾರೆಯ ಅರುಣವಾರಿಯ ಹನಿಹನಿ

ಯೋಧಹೃದಯದ ಧರೆಯ ಹರೆಯಕೆ ಪ್ರಖರತರ ಸಂಜೀವಿನ್ ||೧||


ಹೋಮಧೂಮದ ತಪೋಧಾಮದ ಯೋಗ ಯಾಗದ ತಪಸಿಗೆ

ಸಾರ್ಥಕತೆ ತಂದೀವ ಮಂತ್ರವ ಕಥಿಸಿ ಕೃತಿಸಿದ ಕೀರ್ತಿಗೆ

ಶತಕವಿದರೊಳು ಭಾರತಕೆ ಸಂಘಟನ ಸೂತ್ರದ ರಕ್ಷೆಯ

ತೊಡಿಸಿದಾತನು ನೀನೆ ಪಾರ್ಥನು ನಿನ್ನ ನೆನಪಿಹುದಕ್ಷಯ ||೨||


ಜೀವನದಿಗಳ ತಡೆದು ಶಕ್ತಿಯ ಕಡೆದು ಕೂಡಿದ ಕೋವಿದ

ಜೀವನದ ಗುರಿ ಭವ್ಯ ಮಾಡಿದ ಕುಶಲ ಕರದ ಕಲಾವಿದ

ಪರಿಹರಿಸಲು ತೇದೆ ಶ್ರಮಿಸಿದೆ ತಾಯಿ ಭೂಮಿಯ ಕ್ಲೇಶವ

ಕರ್ಮ ಶೂರನೆ ಯಶವಿಶಾಲನೆ ಯುಗಪುರುಷ ಓ ಕೇಶವ ||೩||


ಜಗದ ಆದಿಯೊಳುದಿಸಿ ಉಳಿದಿಹ ಹಿಂದುದ್ರುಮದಾರೈಕೆಗೆ

ಯುಗದ ಆದಿಯ ದಿನವೆ ಜನಿಸಿದ ಜಗದರಿಕೆ ಹಾರೈಕೆಗೆ

ಪೀಠವಿರಿಸುತ ಹೃದಯವಗಣಿತ ನೀನು ಸೃಜಿಸಿದ ಬಯಕೆಗೆ

ಧಾವಿಸಿಹೆವತಿ ವೇಗ ತ್ಯಾಗದಿ ಧ್ಯೇಯಪಥ ಪೂರೈಕೆಗೆ ||೪||

***

harasi dharegavatarisidO siDilALu mAnava kESava

ALu SvAsavanALu hRudayava sparSisido sarvasvava ||pa||


kalibalOnnata nelada yuvakulaviralu dAriye tOrade

dhyEyadEgula teredu bAgila kareda karadoLu haridide

ninna jIvanadamara dhAreya aruNavAriya hanihani

yOdhahRudayada dhareya hareyake praKaratara saMjIvin ||1||


hOmadhUmada tapOdhAmada yOga yAgada tapasige

sArthakate taMdIva maMtrava kathisi kRutisida kIrtige

SatakavidaroLu BAratake saMGaTana sUtrada rakSheya

toDisidAtanu nIne pArthanu ninna nenapihudakShaya ||2||


jIvanadigaLa taDedu Saktiya kaDedu kUDida kOvida

jIvanada guri Bavya mADida kuSala karada kalAvida

pariharisalu tEde Sramiside tAyi BUmiya klESava

karma SUrane yaSaviSAlane yugapuruSha O kESava ||3||


jagada AdiyoLudisi uLidiha hiMdudrumadAraikege

yugada Adiya dinave janisida jagadarike hAraikege

pIThavirisuta hRudayavagaNita nInu sRujisida bayakege

dhAvisihevati vEga tyAgadi dhyEyapatha pUraikege ||4||

***