Showing posts with label ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ prasannavenkata. Show all posts
Showing posts with label ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ prasannavenkata. Show all posts

Saturday, 9 November 2019

ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ankita prasannavenkata

by ಪ್ರಸನ್ನವೆಂಕಟದಾಸರು
ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ನೀಇನ್ನಾರೊಡೆಯರಿಲ್ಲ ಕಾಯೊ ಲಕ್ಷ್ಮೀನಲ್ಲ ಪ.

ಕರುಣ ನೋಟದಿ ನೋಡಿ ಹೊರಡಿಸಿದ ತಂದೆ ಮಂದರಧರನೆ ಬಸುರೊಳಿಟ್ಟ ತಾಯಿ ನೀನುಧÀರೆಗೆ ಪರಗತಿಗೆ ನೆಲೆಗೊಡುವ ಬಾಂಧವ ನೀನುದುರಿತಕರಿಗಣಕೆ ಸಿಂಹಾಸ್ಯ ನೀನು1

ಷÀಟ್ಕರ್ಮ ಸಂಗ್ರಹವ ಮಾಡಿಸುವ ತಂದೆ ನೀದುಷ್ಕರ್ಮ ಖಂಡಿಸುವ ತಾಯಿ ನೀನುಷಟ್ಕೋಣ ಬಲದಿರುವ ತ್ರಿಕೂಟಾದ್ರಿವಾಸ ವಷಟ್ಕಾರಗೈದೆ ಕೌರವ ಕುಲಾರಿಯು ನೀನು 2

ಶ್ರುತಿವಿರೋಧಿಗಳ ಮೋಹಿಪ ಸುರರ ತಂದೆ ನೀಅತುಳಧರ್ಮಾತ್ಮಕರ ತಾಯಿ ನೀನುಕ್ಷಿತಿಗೆ ವೈಕುಂಠವೆನಿಪ ಪ್ರಸನ್ವೆಂಕಟ ಬಂಧುಗತಿಗೆ ಗತಿಯಾದಾದಿಪುರುಷ ನಮೋ 3
*******