Showing posts with label ಸ್ಥಳವಿಲ್ಲವೈ ಭಾಗವತರೇ ಈಗ ಒಳಗೆ purandara vittala. Show all posts
Showing posts with label ಸ್ಥಳವಿಲ್ಲವೈ ಭಾಗವತರೇ ಈಗ ಒಳಗೆ purandara vittala. Show all posts

Saturday, 7 December 2019

ಸ್ಥಳವಿಲ್ಲವೈ ಭಾಗವತರೇ ಈಗ ಒಳಗೆ purandara vittala

ಪುರಂದರದಾಸರು
ರಾಗ ಕಾಂಭೋಜ. ಅಟ ತಾಳ

ಸ್ಥಳವಿಲ್ಲವಯ್ಯ ಭಾಗವತರೆ
ಒಳಗೆ ಹೊರಗೆ ಸಂದಣಿ ಭಾಳ ತುಂಬಿದೆ ||ಪ||

ಐದಕ್ಕೆ ಇದರೊಳು ಉಂಟು, ಮ-
ತ್ತೈದು ಐದು ಮಂದಿಗಳು ಬೇರುಂಟು
ಐದು ನಾಲ್ಕು ದ್ವಾರಗಳುಂಟು, ನಾವು
ಬೈದರೆ ನಿಮ್ಮದೇನು ಹೋದೀತು ಗಂಟು ||

ಆರು ಮಂದಿ ಮಕ್ಕಳುಂಟು(/ವಕ್ಕಲುಂಟು) ಮ-
ತ್ತಾರು ಮಂದಿ ಪ್ರೇರಕರುಂಟು
ಪ್ರೇರಕರಿಗೆ ಕರ್ತರುಂಟು, ವಿ-
ಚಾರ ಮಾಡಲಿಕ್ಕೆ ನಿಮ್ಮದೇನು ತಂಟು ||

ಅತ್ತೆಯೆಂಬೊಳು ಬಲು ಖೋಡಿ ಎ-
ನ್ನೊತ್ತಿ ಆಳುವ ಪುರುಷ ಹೇಡಿ
ಮತ್ತೆ ಮಾವ ಅಡನಾಡಿ, ಸರಿ-
ಹೊತ್ತಿಗೆ ಬಾಹೋನು ಮೈದುನ ಒಡಿ ||

ನೆಗಣ್ಣಿಯೆಂಬೋಳು ಮುಂಗೋಪಿ, ಮಲ-
ಮಗಳು ಕಂಡರೆ ಸೇರಳು ಮಹತಾಪಿ
ಹಗೆಗಾರತ್ತಿಗೆ ಬಲು ಕೋಪಿ, ಇದರ
ಬಗೆ ತಿಳಿಯದ ನಾದಿನಿ ಮಹಾಪಾಪಿ ||

ಎಷ್ಟು ಹೇಳಲಿ ನಿಮಗೆಲ್ಲ, ಈ
ಕಷ್ಟ ಸಂಸಾರದೊಳಗಿಷ್ಟು ಸುಖವಿಲ್ಲ
ಸೃಷ್ಟಿಗೊಡೆಯ ತಾಂ ಬಲ್ಲ, ಸೃಷ್ಟೀಶ
ದಿಟ್ಟ ಪುರಂದರವಿಠಲ ತಾಂ ಬಲ್ಲ ||
***

pallavi

sthaLavillavayya bhAgavatare oLage horage sandaNi bhALa tumbide

caraNam 1

aidakke idharoLu uNTu mattaidu aidu mandhigaLu bEruNTu
aidu nAlgu dvArangaLuNTu nAvu baidhare nimmadEnu hOdItu gaNTu

caraNam 2

Aru mandi makkaLUNDu mattAru mandi prErakaruNDu
prErakarige kartaruNTu vicAra mADalikke nimdEnu taNTu

caraNam 3

atteyemboLu balu kOTi ennotti Aluva puruSa hEDi
matte mAva aDanADi sari hottige bAhonu maituna oDi

caraNam 4

negaNNiyembOLu mungOpi malamagaLu kaNDare sEraLu mahatApi
hagegArattige balu gOpi idara bage tiLiyada nAdini mahA pApi

caraNam 5

eSTu hELali nimagella I kaSTa samsAradoLagiSTu sukhavilla
shrSTi koDeya tAm balla shrSTIsha diTTa purandara viTTala tAm balla
***

ಸ್ಥಳವಿಲ್ಲವೈ ಭಾಗವತರೇ ಈಗ 
ಒಳಗೆ ಹೊರಗೆಸಂದಣಿತುಂಬಿದೆ ನೋಡಿ ಪ.

ಆಯ್ದೊಕ್ಕಲಿದರೊಳಗುಂಟು - ಮತ್ತೆಆಯ್ಕು ಮಂದಿಯ ಬೇರೆ ಉಂಟುಆಯ್ದು ನಾಲ್ಕು ಇದರೊಳಗುಂಟು - ನೀವುಬೈದರೆ ಏನು ತೆಗೆಯಿರಿ ನಿಮ್ಮ ಗುಂಟು 1

ಆರುಮಂದಿ ಕಳ್ಳರುಂಟು - ಮತ್ತಾರು ಮಂದಿಗೆ ಮತ್ತೆ ಪ್ರೇರಕರುಂಟುಪ್ರೇರಕರಿಗೆ ಕರ್ತರುಂಟು - ವಿಚಾರಿಸುವುದಕೆ ನಿಮಗೇನುಂಟು ? 2

ಅತ್ತೆಯವಳು ಬಲುಖೋಡಿ - ಎನ್ನಒತ್ತಿ ಆಳುವ ಪುರುಷನು ಬುಲುಹೇಡಿಮತ್ತೆ ಮಾವನು ಅಡನಾಡಿ - ಸರಿಹೊತ್ತಿಗೆಬರುವ ಮೈದುನ ಬಲುಕೇಡಿ3

ನಗೆಹೆಣ್ಣು ಎಂಬುವಳು ಕೋಪಿ - ಮಲಮಗಳು ಕಂಡರೆ ಸೇರಳು ಬಲು ಪಾಪಿಹಗೆಗಾತಿಅತ್ತಿಗೆ ಶಾಪಿ - ಸುತ್ತಬೊಗಳುವಳು ತಾಳೆನು ನಾನು ಮುಂಗೋಪಿ 4

ಎಷ್ಟು ಹೇಳಲಿ ನಿಮಗೆಲ್ಲ - ಈಕಷ್ಟ ಸಂಸಾರದೊಳಗೆ ಸುಖವಿಲ್ಲಸ್ಪಷ್ಟವಾಗಿ ಪೇಳ್ಪೆ ಸೊಲ್ಲ - ದೇವಸೃಷ್ಟೀಶ ಪುರಂದರವಿಠಲ ಬಲ್ಲ 5
*********