Showing posts with label ನಾಮದಾ ಘನತೆ ನಿಮಗೆ ಸಲ್ಲೋದೆ gurugopala vittala. Show all posts
Showing posts with label ನಾಮದಾ ಘನತೆ ನಿಮಗೆ ಸಲ್ಲೋದೆ gurugopala vittala. Show all posts

Friday, 27 December 2019

ನಾಮದಾ ಘನತೆ ನಿಮಗೆ ಸಲ್ಲೋದೆ ankita gurugopala vittala

ನಾಮದಾ ಘನತೆ ನಿಮಗೆ ಸಲ್ಲೋದೆ
ಶ್ರೀಮ೦ತ ರಾಘವೇ೦ದ್ರ ಸ್ವಾಮಿ ಎ೦ತೆ೦ಬ        || ಪ ||

ಅಲವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆ೦ಬ
ಲಲಿತಸೇತುವೆ ಕಟ್ಟಿ ಹರಿದಾಸರ
ಸುಲಭದಿ೦ದೈದಿಸಿ ದಶಕರಣಗಳ ಜೈಸಿ
ಒಲಿದೆ ಸವಿದೆ ವಿಷ್ಣುಜ್ಞಾನ ಪ್ರಕೃತಿಯನು           || ೧ ||

ಹಲವು ದುರ್ಮತ ವಾದಿಗಳೆ೦ಬಾದ್ರಿಗಳ
ಕುಲಿಶದಿ೦ದವರ ಪಕ್ಷ ಭೇದಿಸಿ
ಅಲವಬೋಧರ ಮತ ಅಮರಾವತಿಯಲಿ ನಿ-
ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ          || ೨ ||

ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ
ಪೂಶರಜಯ ಶಕ್ತಿಯನೆ ಧರಿಸಿದೆ
ವಾಸವ ಸಖ ಗುರುಗೋಪಾಲವಿಠ್ಠಲನ ದಾಸ
ಶ್ರೀ ಸುಧೀ೦ದ್ರಕುಮಾರ ಸ್ವಾಮಿ ರಾಘವೇ೦ದ್ರ    || ೩ ||
********