Showing posts with label ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ kamalanabha vittala. Show all posts
Showing posts with label ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ kamalanabha vittala. Show all posts

Thursday, 5 August 2021

ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ ankita kamalanabha vittala

 ..

kruti by Nidaguruki Jeevubai


ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ 

ಸುಶೀಲ ಶ್ರೀಲೋಲ ll ಪ ll


ಗೋಕುಲದಿ ಪುಟ್ಟಿ ಆಕಳನೆ ಕಾಯ್ದ

ಗೋವರ್ಧನವನೆತ್ತಿ ಗೋಪವೃಂದ ಕಾಯ್ದ ll 1 ll


ಬಾಲತನವ ನೋಡಿ ಪಾಲುಬೆಣ್ಣೆ ಸೂರೆ

ಬಾಲಗೋಪರೊಡನೆ ಚೋರನೆನಿಸಿ ಮೆರೆದ ll 2 ll


ಮುರಳಿನಾದಗೈದು ಪರಿಪರಿಯ ಜನರ

ಮರುಳುಗೈಸಿ ಮೆರೆದ ಸುರಮುನಿ ವಂದ್ಯ ll 3 ll


ಮಡದಿಯರು ಜಲದಿ ಮುದದಿಂದಾಡುತಿರಲು

ಮದನನಯ್ಯ ವಸ್ತ್ರಗಳನೆ ಕದ್ದ ಚೋರ ll 4 ll


ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದ

ಕಾಮಜನಕ ಹರಿ ಶ್ರೀ ಕಮಲನಾಭವಿಟ್ಠಲ ll 5 ll

***


ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ

ಸುಶೀಲ ಶ್ರೀಲೋಲ ಪ


ಗೋಕುಲದಿ ಪುಟ್ಟಿ ಆಕಳನೆ ಕಾಯ್ದ

ಗೋವರ್ಧನವನೆತ್ತಿ ಗೋಪವೃಂದ ಕಾಯ್ದ 1


ಬಾಲತನವ ನೋಡಿ ಪಾಲುಬೆಣ್ಣೆ ಸೂರೆ

ಬಾಲಗೋಪರೊಡನೆ ಚೋರನೆನಿಸಿ ಮೆರೆದ 2


ಮುರಳಿನಾದಗೈದು ಪರಿಪರಿಯ ಜನರ

ಮರುಳುಗೈಸಿ ಮೆರೆದ ಸುರಮುನಿ ವಂದ್ಯ 3


ಮಡದಿಯರು ಜಲದಿ ಮುದದಿಂದಾಡುತಿರಲು

ಮದನನಯ್ಯ ವಸ್ತ್ರಗಳನೆ ಕದ್ದ ಚೋರ 4


ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದ

ಕಾಮಜನಕ ಹರಿ ಶ್ರೀ ಕಮಲನಾಭ ವಿಠ್ಠಲ5

***