..
kruti by Nidaguruki Jeevubai
ಬಾಲಕೃಷ್ಣ ಬಾ ಬಾ ಹರಿ ಬಾಲಗೋಪಾಲ
ಸುಶೀಲ ಶ್ರೀಲೋಲ ಪ
ಗೋಕುಲದಿ ಪುಟ್ಟಿ ಆಕಳನೆ ಕಾಯ್ದ
ಗೋವರ್ಧನವನೆತ್ತಿ ಗೋಪವೃಂದ ಕಾಯ್ದ 1
ಬಾಲತನವ ನೋಡಿ ಪಾಲುಬೆಣ್ಣೆ ಸೂರೆ
ಬಾಲಗೋಪರೊಡನೆ ಚೋರನೆನಿಸಿ ಮೆರೆದ 2
ಮುರಳಿನಾದಗೈದು ಪರಿಪರಿಯ ಜನರ
ಮರುಳುಗೈಸಿ ಮೆರೆದ ಸುರಮುನಿ ವಂದ್ಯ 3
ಮಡದಿಯರು ಜಲದಿ ಮುದದಿಂದಾಡುತಿರಲು
ಮದನನಯ್ಯ ವಸ್ತ್ರಗಳನೆ ಕದ್ದ ಚೋರ 4
ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದ
ಕಾಮಜನಕ ಹರಿ ಶ್ರೀ ಕಮಲನಾಭ ವಿಠ್ಠಲ5
***
No comments:
Post a Comment