Showing posts with label ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ramesha. Show all posts
Showing posts with label ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ramesha. Show all posts

Monday, 11 November 2019

ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ankita ramesha

by ಗಲಗಲಿಅವ್ವನವರು
ಕೃಷ್ಣ ನಿಮ್ಮೆಲ್ಲರ ಬಿಟ್ಟನೆಒಬ್ಬ ಶ್ರೇಷ್ಠ ನಾರಿಯಮೇಲೆ ಮನಸಿಟ್ಟನೆ ಪ.

ಸತ್ಯ ಸುಶೀಲಳು ಅವಳಮ್ಮಜನಕೆ ತತ್ವ ಬೋಧಿಸುವಳು ಇವಳಮ್ಮ 1

ಕಾಂತೆ ಕೋಮಲ ಹೃದಯದವಳಮ್ಮಬುದ್ಧಿ ಭ್ರಾಂತಿ ಗೈಸುವವಳಿವಳಮ್ಮ 2

ತಪ್ಪದೆ ಸಲಹುವಳವಳಮ್ಮಜನಕೆ ಒಪ್ಪುವ ಗುಣವ ತೋರುವಳಿವಳಮ್ಮ 3

ಶ್ರೀಶನ ಬಿಡದಿಹಳವಳಮ್ಮಅತಿ ಮೋಸಗಾರುತಿಯು ಇವಳಮ್ಮ 4

ಉತ್ತಮಳು ರಮಾ ಅವಳಮ್ಮಅತಿ ಕೀರ್ತಿಯ ಪಡೆದಿಹಳಿವಳಮ್ಮ 5
*******