Showing posts with label ವಿದುರನ ಭಾಗ್ಯವಿದು ಈ ಪದುಮಜಾಂಡ ತಲೆದೂಗುತಲಿದಕೋ purandara vittala VIDURANA BHAAGYAVIDU EE PADUMA JAANDA TALEGOOGUTALIDAKO. Show all posts
Showing posts with label ವಿದುರನ ಭಾಗ್ಯವಿದು ಈ ಪದುಮಜಾಂಡ ತಲೆದೂಗುತಲಿದಕೋ purandara vittala VIDURANA BHAAGYAVIDU EE PADUMA JAANDA TALEGOOGUTALIDAKO. Show all posts

Saturday, 4 December 2021

ವಿದುರನ ಭಾಗ್ಯವಿದು ಈ ಪದುಮಜಾಂಡ ತಲೆದೂಗುತಲಿದಕೋ purandara vittala VIDURANA BHAAGYAVIDU EE PADUMA JAANDA TALEGOOGUTALIDAKO





ವಿದುರನ ಭಾಗ್ಯವಿದು |ಈ
ಪದುಮಜಾಂಡ ತಲೆದೂಗುತಲಿದಕೊ ||ಪ||

ಕುರುರಾಯನು ಖಳನನುಜನು ರವಿಜನು |
ಗುರುಗಾಂಗೇಯರು ನೋಡುತಿರೆ ||
ಹರಿಸಿ ರಥವ ನಡೆಸುತ ಹರಿ ಬೀದಿಲಿ |
ಬರುತಿರೆ ಜನರಿಗೆ ಸೋಜಿಗವೆನಿಸುತ ||೧||

ಹೃದಯದೊಳಗೆ ನೆಲೆಗೊಂಡಿಹ ಹರಿಯನು |
ಎದುರಲಿ ಕಾಣುತ ವಿದುರನು ತಾ ||
ಸದನವ ನೂಕುತಲಾಕ್ಷಣ ಬೀದಿಗೆ |
ಮುದದಿಂದಲಿ ಕುಣಿದಾಡುತ ಬಂದನು ||೨||

ದೂರದಲಿಹ ಶ್ರೀಶನ ನೋಡುತ ಬಹು |
ಹಾರುತ ಚೀರುತ ಮೈಮರೆದು ||
ವಾರಿಧಾರೆಯನು ನೇತ್ರದಿ ಸುರಿಸುತ |
ಬಾರಿ ಬಾರಿ ಬಲು ಹಿಗ್ಗುವ ಮನದಲಿ ||೩||

ಅಡಿಗಡಿಗೆ ತನುಗೆಡವುತಲೇಳುತ |
ದೃಢಭಕುತಿಲಿ ಗದ್ಗದ ಸ್ವರದಿಂ ||
ನುಡಿಗಳು ತೊದಲುತ ರೋಮ ಪುಳಕಿತದಿ |
ದುಡು ದುಡು ಓಡಾಡುವ ದಶದಿಶೆಯಲಿ ||೪||

ಹಾಡುವ ಹಾರುವ ಚೀರುವುದೆಲ್ಲನು |
ನೋಡಿ ನಗುತಲಿರೆ ಮಾಧವನು ||
ನೀಡುತ ಕರವ ಪಿಡಿದು ಬಿಗಿದಪ್ಪಿ ಕೊಂ |
ಡಾಡುತ ಬಹಳ ಯಮಾಂಶನನು ||೫||

ಒಲ್ಲನು ಕುಜನರ ಸೇವೆಯೆಂಬ ನುಡಿ |
ಸಲ್ಲಿಸುವುದಕಾ ಸಮಯದಲಿ |
ಮಲ್ಲ ವಿದುರನಾ ಕುತ್ಸಿತ ಕುಟೀರ |
ದಲ್ಲಿ ಬಂದು ಕುಳಿತನು ಇದೇ ಸಾಕ್ಷಿಯು ||೬||

ಶ್ರೀನಿವಾಸ ಮಂದಿರದೊಳು ಬರ |
ಲಾನಂದಾಬ್ಧಿಯೊಳೀಸುತಲೆ ||
ಏನೆಂಬೆನು ಸುಕೃತವೇನೊದಗಿತೊ |
ತಾನೆ ಬಂದ ಬಹು ವಿಚಿತ್ರವೆನುತಲಿ ||೭||

ಗಂಗೋದಕದಲಿ ಪದಯುಗ್ಮವ ತೊಳೆ |
ದಂಗಕೆ ಪೂಸಿ ಸುಗಂಧವನು ||
ಮಂಗಳಕರ ಪುಷ್ಪಂಗಳ ಸಮರ್ಪಿಸಿ |
ಕಂಗಳ ದಣಿದಣಿ ನೋಡುತ ಮೂರ್ತಿಯ ||೮||

ವಾರಿಧಿ ಮನೆಯಾದಖಿಲೇಶಗೆ ಗೋ |
ಕ್ಷೀರ ಸ್ವಲ್ಪ ಕೊಡಲಾದರದಿ ||
ವಾರಿಜಾಕ್ಷ ಕರಸಂಪುಟದಿ ಕುಡಿದು |
ನೀರಂದದಿ ಹರಿಸಿದ ಬೀದಿಯೊಳಗೆ ||೯||

ಒಂದು ಕುಡುತೆ ಪಾಲಿಗೆ ಹಳ್ಳಾಯಿತು |
ಮಂದರಧರನ ಮಹಾತ್ಮೆಯನು ||
ಇಂದಿರೆಗಸದಳ ಚಿಂತಿಸಲೆಂದಿಗು |
ಮಂದನು ಬಲ್ಲನೆ ಎಂದು ಪೊಗಳುತಿಹ ||೧೦||

ಸುರರಾಕಾಶದಿ ನೆರೆದು ನೋಡಿ ಬಲು |
ಹರುಷದಿ ವಿದುರನ ಪೊಗಳುವರು ||
ಸಿರಿದೇವಿಯರಸ ಪುರಂದರವಿಠಲನ |
ಶರಣರೆ ಧನ್ಯರು ಧನ್ಯರು ಧರೆಯೊಳು ||೧೧||
***

vidurana bhaagyavidu |I
padumajaaMDa taledUgutalidako ||pa||

kururaayanu KaLananujanu ravijanu |
gurugaaMgEyaru nODutire ||
harisi rathava naDesuta hari bIdili |
barutire janarige sOjigavenisuta ||1||

hRudayadoLage nelegoMDiha hariyanu |
edurali kaaNuta viduranu taa ||
sadanava nUkutalaakShaNa bIdige |
mudadiMdali kuNidaaDuta baMdanu ||2||

dUradaliha shrIshana nODuta bahu |
haaruta cIruta maimaredu ||
vaaridhaareyanu nEtradi surisuta |
baari baari balu higguva manadali ||3||

aDigaDige tanugeDavutalELuta |
dRuDhabhakutili gadgada svaradiM ||
nuDigaLu todaluta rOma puLakitadi |
duDu duDu ODaaDuva dashadisheyali ||4||

haaDuva haaruva cIruvudellanu |
nODi nagutalire maadhavanu ||
nIDuta karava piDidu bigidappi koM |
DaaDuta bahaLa yamaaMshananu ||5||

ollanu kujanara sEveyeMba nuDi |
sallisuvudakaa samayadali |
malla viduranaa kutsita kuTIra |
dalli baMdu kuLitanu idE saakShiyu ||6||

shrInivaasa maMdiradoLu bara |
laanaMdaabdhiyoLIsutale ||
EneMbenu sukRutavEnodagito |
taane baMda bahu vicitravenutali ||7||

gaMgOdakadali padayugmava toLe |
daMgake pUsi sugaMdhavanu ||
maMgaLakara puShpaMgaLa samarpisi |
kaMgaLa daNidaNi nODuta mUrtiya ||8||

vaaridhi maneyaadaKilEshage gO |
kShIra svalpa koDalaadaradi ||
vaarijaakSha karasaMpuTadi kuDidu |
nIraMdadi harisida bIdiyoLage ||9||

oMdu kuDute paalige haLLaayitu |
maMdaradharana mahaatmeyanu ||
iMdiregasadaLa ciMtisaleMdigu |
maMdanu ballane eMdu pogaLutiha ||10||

suraraakaashadi neredu nODi balu |
haruShadi vidurana pogaLuvaru ||
siridEviyarasa puraMdaraviThalana |
sharaNare dhanyaru dhanyaru dhareyoLu ||11||
***

pallavi

vidurana bhAgyavidu I padumajANDa taletogutalidakO

caraNam 1

gururAyanu khaLananujanu ravijanu guru gAngEyaru nODutire
harisi rathava naDEsuta hari bIdili barutire janarige sOjigavenisuta

caraNam 2

hrdayadoLage nele goNDiha hariyanu edurali kANuta viduranu tA
sadanava nUkukulatA kSaNa bItige madadindali kuNidADuta bandanu

caraNam 3

dUradaliha shrIshana nODuta bahu hAruta cIruta mai maredu
vAridhAreyanu nEtradi surisuta bAri bAri balu higguva manadali

caraNam 4

aDigaDige tanu keDavutalELuta drDha bhakutiyali gadgada svaradim
nuDigaLu todaluta rOma puLakitadi duDu duDu ODADuva dasha disheyali

caraNam 5

hADuva hAruva cIruvudellanu nODi nagutalire mAdhavanu
nIDuta karava piDidu bigidappi koNDADuta bahaLa yamAmshananu

caraNam 6

ollanu kujanara sEveyemba nuDi sallisuvudakA samayadali
malla vidUranA kutsita kukSaradalli bandu kuLitanu idE sAkSiyu

caraNam 7

shrInivAsa mantiradoLu baralAnandAbdhiyoLIsutale
Enembenu sukrtavEnodagido tAne banda bahu vicitravenutali

caraNam 8

gangOdakadali padyugmava toLedangake pUsi su-gandhavanu
mangaLakara puSpangaLa samarpisi kangaLa thaNithaNi nODuta mUrtiya

caraNam 9

vAridhi maneyAdakhilEshake gOkSIra svalpa koDalAdaradi
vArijAkSa kara sampuTadi kuDidu nIrandadi harisida bIdiyoLage

caraNam 10

ondu kuDute pAlige haLLAyitu mandaradharana mahAtmeyanu
indiregasadaLa cittisalendigu mandanu ballane endu pogaLutiha

caraNam 11

surarAkAshadi neredu nODi balu haruSadi vidUrana pogaLuvaru
siri dEviyarasa purandara viTTalana sharaNare dhanyaru dhanyaru dhareyoLu
***

ವಿದುರನ ಭಾಗ್ಯವಿದು ಈ
ಪದುಮಜಾಂಡ ತಲೆದೂಗುತಲಿದಕೋ ||ಪ||

ಕುರುರಾಯನ ಖಳಶ್ರೇಷ್ಠನ ರವಿಜನ
ಗುರು ಗಾಂಗೇಯನ ಯದುವರನು
ಜರೆದು ರಥವ ನಡೆಸುತ ಬೀದಿಯೊಳಗೆ
ಬರುತಿರೆ ಜನರಿಗೆ ಸೋಜಿಗವೆನಿಸುತ ||

ಹೃದಯದೊಳಗೆ ನೆಲೆಗೊಂಡಿಹ ಹರಿಯನು
ಎದುರಲಿ ಕಾಣುತ ವಿದುರನು ತಾ
ಸದನವ ನೂಕುತಲಾಕ್ಷಣ ಬೀದಿಗೆ
ಮುದದಿಂದಲಿ ಕುಣಿದಾಡುತ ಬಂದನು ||

ದೂರದಲಿಹ ಶ್ರೀಶನ ನೋಡುತ ಬಹು
ಹಾರುತ ಚೀರುತ ಮೈಮರೆತು
ವಾರಿಧಾರೆಯನು ನೇತ್ರದಿ ಸುರಿಸುತ
ಬಾರಿ ಬಾರಿ ಬಲು ಹಿಗ್ಗುವ ಮನದಲಿ ||

ಅಡಿಗಡಿಗೆ ತನು ಕೆಡವುತಲೇಳುತ
ದೃಢ ಭಕುತಿಯಲಿ ಗದ್ಗದ ಸ್ವರದಿಂ
ನುಡಿಗಳು ತೊದಲುತ ರೋಮ ಪುಳಕಿತದಿ
ದುಡುದುಡು ಓಡಾಡುವ ದಶದಿಶೆಯಲಿ ||

ಹಾಡುವ ಹಾರುವ ಚೀರುವುದೆಲ್ಲನು
ನೋಡಿ ನಗುತಲಿರೆ ಮಾಧವನು
ನೀಡುತ ಕರವ ಪಿಡಿದು ಬಿಗಿದಪ್ಪಿ ಕೊಂ-
ಡಾಡುತ ಬಹಳ ಯಮಾಂಶನನು ||

ಒಲ್ಲನು ಕುಜನರ ಸೇವೆಯೆಂಬ ನುಡಿ
ಸಲ್ಲಿಸುವುದಕಾ ಸಮಯದಲಿ
ಮಲ್ಲ ವಿದುರನಾ ಕುತ್ಸಿತ ಕುಟೀರದಲ್ಲಿ
ಬಂದು ಕುಳಿತನು ಇದೇ ಸಾಕ್ಷಿಯು ||

ಶ್ರೀನಿವಾಸ ಮಂದಿರದೊಳು ಬರ-
ಲಾನಂದಾಬ್ಧಿಯೊಳಗೆ ಈಸುತಲಿ
ಏನೆಂಬೆನು ಸುಕೃತವೇನೊದಗಿತೊ
ತಾನೆ ಬಂದ ಬಹು ವಿಚಿತ್ರವೆನುತಲಿ ||

ಗಂಗೋದಕದಲಿ ಪದಯುಗ್ಮವ ತೊಳೆ-
ದಂಗಕೆ ಪೂಸಿ ಸುಗಂಧವನು
ಮಂಗಳಕರ ಪುಷ್ಪಂಗಳ ಸಮರ್ಪಿಸಿ
ಕಂಗಳ ದಣಿದಣಿ ನೋಡುತ ಮೂರ್ತಿಯ ||

ವಾರಿಧಿ ಮನೆಯಾದಖಿಲೇಶಗೆ ಗೋ-
ಕ್ಷೀರ ಸ್ವಲ್ಪ ಕೊಡಲಾದರದಿ
ವಾರಿಜಾಕ್ಷ ಕರ ಸಂಪುಟದಿ ಕುಡಿದು
ನೀರಂದದಿ ಹರಿಸಿದ ಬೀದಿಯೊಳಗೆ ||

ಒಂದು ಕುಡುತೆ ಪಾಲಿಗೆ ಹಳ್ಳಾಯಿತು
ಮಂದರಧರನ ಮಹಾತ್ಮೆಯನು
ಇಂದಿರೆಗಸದಳ ಚಿಂತಿಸಲೆಂದಿಗು
ಮಂದನು ಬಲ್ಲನೆ ಎಂದು ಪೊಗಳುತಿಹ ||

ಸುರರಾಕಾಶದಿ ನೆರೆದು ನೋಡಿ ಬಲು-
ಹರುಷದಿ ವಿದುರನ ಪೊಗಳುವರು
ಸಿರಿದೇವಿಯರಸ ಪುರಂದರವಿಠಲನ
ಶರಣರೆ ಧನ್ಯರು ಧನ್ಯರು ಧರೆಯೊಳು ||
***

ರಾಗ ಕನ್ನಡಕಾಂಭೋಜ ಏಕತಾಳ (raga tala may differ in audio)