ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )
ರಾಗ ಪೀಲು ಆದಿತಾಳ
ತಂಗಿ ನೀ ಕೇಳಿದ್ಯಾ ಅಂಗನಾಮಣಿ ।
ರಂಗನೊಲಿದ ಭಾಗವತರ ಮಹಿಮೆಗಳ ॥ ಪ ॥
ಶ್ರವಣಾದಿ ನವವಿಧ ಸವಿಯ ಭಕುತಿಯಿಂದ ।
ಪ್ರವೀಣರೆನಿಸಿ ಶ್ರೀಮಾಧವನ ಧೇನಿಪ ಖ್ಯಾತಿ ॥ 1 ॥
ಅಮಲ ಸತ್ಕರ್ಮದಿ ಶಮದಮ ಪೂರ್ವಕ ।
ಅಮಿತ ಮಹಿಮನಂಘ್ರಿ ಕಮಲಾರ್ಚಿಪರ ಖ್ಯಾತಿ ॥ 2 ॥
ಶ್ರೀದವಿಟ್ಠಲನ ಪಾದಭಜಕರಾದ ।
ಸಾಧುವರ್ಯರ ಸುಬೋಧ ಬಣ್ಣಿಪರಾರೆ ॥ 3 ॥
********
Song on Jagannatha dasa
ತಂಗಿ ನೀ ಕೇಳಿದ್ಯಾ ಅಂಗನಾಮಣಿ
ರಂಗನೊಲಿದ ಭಾಗವತರ ಮಹಿಮೆಗಳ ||pa||
ಶ್ರವಣಾದಿ ನವವಿಧ ಸವಿಯ ಭಕುತಿಯಿಂದ
ಪ್ರವೀಣನೆನಿಸಿ ಮಾಧವನ ಧ್ಯಾನಿಪ ಖ್ಯಾತಿ ||1||
ಅಮಲ ಸತ್ಕರ್ಮದಿ ಶಮದಮಪೂರ್ವಕ
ಅಮಿತ ಮಹಿಮನಂಘ್ರಿ ಕಮಲಾಖ್ಯಪರ ಖ್ಯಾತಿ ||2||
ಶ್ರೀದವಿಠಲನ ಪಾದಭಜಕರಾದ
ಸಾಧುವರ್ಯರ ಸುಬೋಧ ಬಣ್ಣಿಪರಾರೆ ||3||
********