..
ಬಾಲನೆ ಬಹುವಿಭವದಲಿ ಬಾಳೆಲೊ ಚಿರಕಾಲದಲಿ ಪ
ಶುದ್ಧ ಸದ್ಭಕುತಿ ಭಾವದಲಿ ಮಧ್ವಶಾಸ್ತ್ರವ ಪಠಿಸುತಲಿ |
ಸದ್ವೈಷ್ಣವನೆಂದೆನಿಸುತಲಿ ಬಾಳೆಲೋ ನೀ ಚಿರಕಾಲದಲಿ 1
ತಾಯಿನುಡಿಯ ಸೇವೆಗೈದು ನ್ಯಾಯಮಾರ್ಗದಲಿ ನಡೆದು |
ಬೇಗ ಆಯಿತ ಜಯ ಯಶ ಪಡೆದು ಬಾಳೆಲೊ 2
ದಾಸವೃತ್ತಿಯನು ಅನುಸರಿಸಿ ಶ್ರೀ ಶಮಸುಂದರ ನೊಲಿಸಿ
ಸತಿ ಸುತರಿಂದಲಿ ಹಿತದಿಂದಲಿ ಬಾಳೋ 3
***