Showing posts with label ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ neleyadikeshava ಮುಂಡಿಗೆ mundige. Show all posts
Showing posts with label ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ neleyadikeshava ಮುಂಡಿಗೆ mundige. Show all posts

Wednesday, 1 September 2021

ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ ankita neleyadikeshava ಮುಂಡಿಗೆ mundige

 ..

ಮೂವರೇರಿದ ಬಂಡಿ ಹೊರೆನೆನದುದೇವಕೀ ನಂದನನು ತಾನೊಬ್ಬ ಬಲ್ಲ ಪ

ಆಡಿ ಪೊತ್ತವನೊಬ್ಬ ನೋಡಿ ತಿರುಗಿದನೊಬ್ಬಓಡಾಡಿದನೊಬ್ಬ ಈ ಮೂವರುಆಡಿದವಗೆ ಕಿವಿಯಿಲ್ಲ ನೋಡಿದವನ ಮಗ ಪಾಪಿಓಡಾಡಿದವನೊಬ್ಬ ಓಡನಯ್ಯ 1

ಮಾಯಾಕಾರನು ಒಬ್ಬ ಕಾಯ ಬಡಲಿಗನೊಬ್ಬಕಾಯ ಗಿರಿಪೊತ್ತನೊಬ್ಬ ಈ ಮೂವರುಮಾಯಾಕಾರಗೆ ರೂಪ ಕಾಯ ಬಡಲಿಗ ಚೆಲ್ವಕಾಯ ಗಿರಿ ಪೊತ್ತವನು ಕಡುಧರ್ಮಿಯು 2

ಹರಿಗೆ ಮಾವನು ಆದ ಹರಿಗಳಿಯ ತಾನಾದಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದಸಿರಿಧರನು ಕಾಗಿನೆಲೆಯಾದಿಕೇಶವರಾಯ3

***