ರಾಗ ಆನಂದಭೈರವಿ ಆದಿತಾಳ
2nd audio by Ms. Nandini Sripad
ಸುವ್ವಿ ಶ್ರೀದೇವಿರಮಣ ಸುವ್ವಿ ಸರ್ಪರಾಜಶಯನ
ಸುವ್ವಿ ದೈತ್ಯನಿಕರಹರಣ ಸುವ್ವಿ ನಾರಾಯ್ಣ || ಪ. ||
ಭವ್ಯ ಚರಿತ ದುರಿತ ವಿಪಿನ ಹವ್ಯ ವಾಹನ ಭವೇಂದ್ರಾದಿ
ಸೇವ್ಯಮಾನ ಸುಪ್ರಸಿದ್ಧ ಸುಲಭ ಮೂರುತೇ ||
ಅವ್ಯಯಾತ್ಮನೇ ಸುಖಾತ್ಮ ನಿನ್ನ ದಿವ್ಯ ಮಹಿಮೆ ತುತಿಪ
ಸುವ್ವಿವೇಕಿಗಳಿಗೆ ಕೊಡುವುದಮಿತ ಮೋದವ || 1 ||
ವಾಸವಾದ್ಯಮರ ವಾತಾಶಿಶಾರದೇಂದು ಮಧ್ವ -
ದೇಶಿಕಾರ್ಯ ಚಿತ್ತ ಸಿಂಹಪೀಠ ಮಧ್ಯಗ ||
ದೇಶ ಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀ ಮ -
ಹೀಸಮೇತ ಕೃಷ್ಣ ಕೊಡಲಿ ಎಮಗೆ ಮೋದವ || 2 ||
ಕಮಲಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ -
ರಮಣ ಮತ್ಸ್ಯನಾಗಿ ತಂದ ಶರಧಿ ಮಥನದಿ||
ಕಮಠರೂಪದಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ
ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ || 3 ||
ಕನಕಲೋಚನನ್ನ ಸದೆದು ಮನುಜ ಸಿಂಗವೇಷನಾದ
ದ್ಯುನದಿ ಪಡೆದ ಜನನಿ ಕಡಿದು ವನವ ಚರಿಸಿದ ||
ಜನಪ ಕಂಸನೊದೆದು ತ್ರಿಪುರವನಿತೆಸು- ವ್ರತವನಳಿದ
ವಿನುತ ಕಲ್ಕಿ ದೇವರಾಜ ಎಮ್ಮ ಸಲಹಲಿ || 4 ||
ಪಾಹಿ ಪಾವನ್ನಚರಿತ ಪಾಹಿ ಪಾಹಿ ಪದ್ಮನೇತ್ರ
ಪಾಹಿ ನಿಗಮನಿಕರ ಸ್ತೋತ್ರ ಲಲಿತಗಾತ್ರ ಮಾಂ||
ಪಾಹಿ ಸಜ್ಜನಸ್ತೋಮಮಿತ್ರ ದೋಷದೂರ ಸುಗುಣ ಸಂ -
ದೋಹ ಜಗನ್ನಾಥವಿಠಲ ಜಯ ತ್ರಿಧಾಮಗ ॥ 5 ॥
******