Showing posts with label ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು mahipati. Show all posts
Showing posts with label ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು mahipati. Show all posts

Wednesday, 1 September 2021

ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ನಿಜ ಗುಹ್ಯದ ಮಾತು ಸುಜನರಿಗಲ್ಲದೆ ತಿಳಿಯದು pa


ಕಣ್ಣಿಗೆ ಕಣ್ಹೇಳುವ ಮಾತು ಪುಣ್ಯವಂತರಿಗಿದೆ ಹೊಳೆದೀತು ಇನ್ನೊಬ್ಬರಿಗೇನು ತಿಳಿದೀತು ಚಿನ್ಮಯದ ವಸ್ತು 1 

ನೀತಿಗೆ ನಿಜವಾಗಿಹ್ಯ ಮುಗುಟ ಮಾತಿಗೆ ಮುಟ್ಟದವನೆ ಬಲು ನಿಗಟ ಮತಿಹೀನರಿಗಿದೇ ಒಗಟ ಯತಿಜನರಿಗೆ ಪ್ರಗಟ 2 

ಸೋಹ್ಯ ಸೊನ್ನೆಯ ಮಾತನೆ ಕೇಳಿಕೊ ಗುಹ್ಯ ಹೇಳುವ ಗುರು ಬಳಕೊ ಮಹಿಪತಿ ನಿನ್ನೊಳು ನೀ ತಿಳಕೊ ಸಿದ್ಧದ ಬಲು ಬೆಳಕೊ 3

***