Showing posts with label ಮರವನೇರಿ ಮಡುವದು ಮುಂದಾ govinda. Show all posts
Showing posts with label ಮರವನೇರಿ ಮಡುವದು ಮುಂದಾ govinda. Show all posts

Friday, 15 November 2019

ಮರವನೇರಿ ಮಡುವದು ಮುಂದಾ ankita govinda

by ಗೋವಿಂದದಾಸ
ಮರವನೇರಿ ಮಡುವದು ಮುಂದಾ ಶ್ರೀ ಕೃಷ್ಣ ಕಾಳಿಶಿರವನೇರಿ ತಾಂಡವವಾಡಿದಾಸ್ಮರಿಸಲವನ ತರುಣಿಯರಿಗೆ ವರವ ಪ್ರಾಣವಿರಿಸಿ ಕೊಟ್ಟುಶಿರದಿಚರಣಗುರುತನಿರಿಸಿ ಪೊರೆದ ಕಾಳಿಂಗನನು ಕೃಷ್ಣ 1

ರಜತಗಿರಿಗೆ ಸದೃಶವೆನಿಸಿದ ಶ್ರೀಕೃಷ್ಣ ಯಮ-ಳಾರ್ಜುನವೆಂಬ ಮರವ ಕೆಡಹಿದಅಜಗರನ ನಿಜ ಉರಕೆ ಬಿಜಯಂಗೈದು ಸುಜನೋದ್ಭಾರಿಭಜಿಸೆ ಗೋವ್ರಜವ ಕಾಯ್ದ ಅಜಗರನ ಸೀಳಿ ಕೃಷ್ಣ 2

ಚಂದ್ರಮುಖಿಯರುಡುವ ಶೀರೆಯ ಶ್ರೀಕೃಷ್ಣನು ಮರದಿಬಂಧಿಸಿಟ್ಟು ಮಾನಗಳೆವೆಯಾನಂದನನ್ನು ಬಂದು ತುಡುಕಿದಂದು ಫಣಿಯ ಹೊಂದಿಸಿದೆನಂದಗೋಪಿ ಕಂದ ಗೋವಿಂದದಾಸವಂದ್ಯ 3
******