Showing posts with label ಳಳ- RSS- ಬಾಳ ಹಣತೆ ಜ್ಯೋತಿ BAALA HANATE JYOTI rss. Show all posts
Showing posts with label ಳಳ- RSS- ಬಾಳ ಹಣತೆ ಜ್ಯೋತಿ BAALA HANATE JYOTI rss. Show all posts

Friday, 24 December 2021

ಬಾಳ ಹಣತೆ ಜ್ಯೋತಿ others BAALA HANATE JYOTI rss



RSS song  

ಬಾಳ ಹಣತೆ ಜ್ಯೋತಿ ನಗಲಿ ಎರೆವ ಸೇವೆ ತೈಲವ

ಶುದ್ಧ ಮಮತೆ ಭಕ್ತಿ ಇರಲಿ ಪೊರೆವ ಸ್ವಾರ್ಥ ಮೋಹವ ||ಪ||


ಕರುಣೆ ಕಡಲ ಒಡಲಿನಲ್ಲಿ ತೊಳೆದು ಬಿಡುವ ಭೇದವ

ಸ್ಫೂರ್ತಿ ಗಂಗೆ ಉಕ್ಕಿ ಬರಲಿ ಕೊಚ್ಚಿ ಜಡ ಸ್ವಭಾವವ

ಸ್ವಾಭಿಮಾನ ಕವಚದಲ್ಲಿ ಪೊರೆವ ಸತ್ಯ ಧರ್ಮವ

ಬಿರಿದು ಬದುಕು ಶ್ರಮಿಸುತಿರಲಿ ಅರಿತು ಸಮಯ ಮೌಲ್ಯವ ||೧||


ದೇಹದುಸಿರು ಸ್ಥಿರವದಲ್ಲ ಅಮರ ನಮ್ಮ ಕಾಯಕ

ಒಂದುಗೂಡಿ ನಡೆವೆವೆಲ್ಲ ದಾಟಿ ಸಕಲ ಕಂಟಕ

ಕೀರ್ತಿ ಕನಕ ಬಯಕೆ ಸಲ್ಲ ಧ್ಯೇಯಕದುವೆ ಮಾರಕ

ಪ್ರೀತಿ ಸಹನೆ ಶ್ರಮದ ದುಡಿಮೆ ರಾಷ್ಟ್ರಹಿತಕೆ ಸಾಧಕ ||೨||


ತ್ಯಾಗ ಒಂದೆ ಮೂಲ ಮಂತ್ರ ಮಾನವತೆಯ ಸ್ಪಂದನ

ಭೇದವಳಿಸಿ ಸಮತೆ ಬೆಳೆಸಿ ತಂಪುಣಿಸುವ ಚಂದನ

ಸೇವೆಯೆಮಗೆ ರಾಷ್ಟ್ರಕಾರ್ಯ ಋಣವ ಕಳೆಯೆ ಕಾರಣ

ಮನುಜ ಜನ್ಮ ಧನ್ಯತೆಗಿದು ಏಕಮೇವ ಸಾಧನ ||೩||

***