ಕಾಖಂಡಕಿ ಶ್ರೀ ಕೃಷ್ಣದಾಸರು
ಧುಮ್ಮಸಾಲೆನ್ನಿರೈಯ್ಯಾ | ಒಮ್ಮೆ ಸಾಧು ಜನರು | ಬೊಮ್ಮನ ಪದವಪಡದ | ನಮ್ಮ ಮುಖ್ಯ ಪ್ರಾಣನ ಪ
ನಷ್ಟರಾವಣನ ಬಾಲಕ್ಕಿಟ್ಟ ಬೆಂಕಿಯಿಂದ ಲಂಕಾ | ಪಟ್ಟಣವ ಸುಟ್ಟು ಬೊಬ್ಬೆ ನಿಟ್ಟ ಹನುಮಪ್ಪನಾ 1
ಪಾಪಕರ್ಮಕೀಚಕಾದಿ | ಕಾಪುರುಷ ಕೌರವರಾ | ಕೋಪಾಗ್ನಿಯಲಿ ಸುಟ್ಟ | ಭೂಪ ಭೀಮನಾ 2
ಉದ್ಧಟ ದುರ್ವಾದಿಗಳಾ | ಸಿದ್ಧಾಂತವೆಂಬ ವಹ್ನಿಯಲ್ಲಿ | ಬುದ್ಧಿಯಿಂದ ಉರಹಿದಾಪ್ರ | ಸಿದ್ಧಮಧ್ವರಾಯನಾ 3
ಮೂಲ ಗುರುವಾಗಿ ಜಗ | ಪಾಲಿಸುವಾ ಮಹಿಪತಿ | ಸಿರಿ | ಲೋಲನಿಜ ದಾಸನಾ 4
***