Showing posts with label ಪ್ರಾಣದೇವನೆ ನಲ್ಲದೆ ಕಾಯ್ವರ ankita jagannatha vittala PRAANADEVANE NALLADA KAAYVARA. Show all posts
Showing posts with label ಪ್ರಾಣದೇವನೆ ನಲ್ಲದೆ ಕಾಯ್ವರ ankita jagannatha vittala PRAANADEVANE NALLADA KAAYVARA. Show all posts

Saturday, 4 December 2021

ಪ್ರಾಣದೇವನೆ ನಲ್ಲದೆ ಕಾಯ್ವರ ankita jagannatha vittala PRAANADEVANE NALLADA KAAYVARA



ಪ್ರಾಣದೇವನೆ ನಲ್ಲದೆ ಕಾಯ್ವರ 
ಕಾಣೆ ಲೋಕದೊಳಗೆ   ಪ

ಪ್ರಾಣೋಪಾನ ವ್ಯಾನೋದಾನ
ಸಮಾನನೆನಿಪ ಮುಖ್ಯ ಅ.ಪ.

ವಾಸವ ಕುಲಿಶದಿ ಘಾತಿಸೆ ಜೀವರ
ಶ್ವಾಸ ನಿರೋಧಿಸಿದೆ
ಆ ಸಮಯದಿ ಕಮಲಾಸನ ಪೇಳಲು
ನೀ ಸಲಹಿದೆ ಜಗವಾ ಮುಖ್ಯ1

ಅಂಗದ ಪ್ರಮುಖ ಪ್ಲವಂಗರು ರಾಮನ
ಅಂಗನೆಯನು ಪುಡುಕೆ
ತಿಂಗಳು ಮೀರಲು ಕಂಗೆಡೆ ಕಪಿಗಳ
ಜಂಗುಳಿ ಪಾಲಿಸಿದೆ ಮುಖ್ಯ 2

ನೀಲ ಸು
ಗ್ರೀವ ಮುಖ್ಯರ ಬಿಗಿಯೆ
ಸಾವಿರದೈವತ್ತು ಗಾವುದದಲ್ಲಿಹ ಸಂ
ಜೀವನ ಜವದಿ ತಂದೆ ಮುಖ್ಯ 3

ಪರಿಸರ ನೀನಿರೆ ಹರಿತಾನಿಪ್ಪನು
ಇರದಿರೆ ತಾನಿರನು
ಕರಣ ನಿಯಾಮಕ ಸುರರಗುರುವೆ ನೀ
ಕರುಣಿಸೆ ಕರುಣಿಸುವಾ 4

ಭೂತೇಂದ್ರಿಯದಧಿನಾಥ ನಿಯಾಮಕ
ಆ ತೈಜಸಹರನಾ
ತಾತನೆನಿಪ ಜಗನ್ನಾಥ ವಿಠಲನ
ಪ್ರೀತಿ ಪಾತ್ರನಾದ ಮುಖ್ಯ 5
********