Showing posts with label ಅಷ್ಟ ಮಹಾ ಮಂತ್ರಗಳು venugopal ankita suladi ಸೃಷ್ಟಿಕ್ರಿಯಾ ಸುಳಾದಿ ASHTA MAHA MANTRAGALU SRUSHTI KRIYA SULADI. Show all posts
Showing posts with label ಅಷ್ಟ ಮಹಾ ಮಂತ್ರಗಳು venugopal ankita suladi ಸೃಷ್ಟಿಕ್ರಿಯಾ ಸುಳಾದಿ ASHTA MAHA MANTRAGALU SRUSHTI KRIYA SULADI. Show all posts

Sunday, 8 December 2019

ಅಷ್ಟ ಮಹಾ ಮಂತ್ರಗಳು venugopal ankita suladi ಸೃಷ್ಟಿಕ್ರಿಯಾ ಸುಳಾದಿ ASHTA MAHA MANTRAGALU SRUSHTI KRIYA SULADI

Audio by Mrs. Nandini Sripad

ಶ್ರೀ ವೇಣುಗೋಪಾಲದಾಸಾರ್ಯ ವಿರಚಿತ  ಸೃಷ್ಟಿಕ್ರಿಯಾ ಸುಳಾದಿ 
( ಶ್ರೀಹರಿ ಸೃಷ್ಟ್ಯಾದಿ ಅಷ್ಟ ಕರ್ತೃ ಸ್ವತಂತ್ರನು )

 ರಾಗ ಸಾರಂಗ 

 ಝಂಪೆತಾಳ 

ಅಷ್ಟ ಮಹಾ ಮಂತ್ರಗಳು ನಿಷ್ಟಿಯಿಂದಲಿ ಕ್ಷುತು
ತೃಷ್ಣಿಗಳ ಕಟ್ಟಿ ಸಂತತ ಮಾಡಲು
ಸ್ಪಷ್ಟವಾಗುವದೇನೊ ನಿನಗೆ ಜ್ಞಾನವು ಬಲು
ಕಷ್ಟವಲ್ಲದೆ ಬರಿದೆ ಮನುಜ ಕೇಳೊ
ದೃಷ್ಟಿಯನು ಮುಚ್ಚಿ ಪ್ರತಿಷ್ಟಿಯಲಿ ಅಂಗಗಳು
ಬೊಟ್ಟಿಲಿಂದಲಿ ಎಷ್ಟು ಮುಟ್ಟಲೇನು
ಬೆಟ್ಟವನು ಏರಿ ಬಿಸಲೊಳಗೆ ಬಳಲಿಸಿ ದೇಹ -
ಪುಷ್ಟವನು ತೊರೆದರೆ ಇಷ್ಟವಾಹದೆ 
ಅಷ್ಟ ಮದಗಳು ಮುರಿದು ನಷ್ಟ ವಿಷಯವ ಜರಿದು
ಅಷ್ಟು ಇಷ್ಟೆಂದು ಹರಿ ಕೊಟ್ಟದೆನ್ನದೆ
ಮುಟ್ಟಿ ಮನವನು ತಿಳಿಯೊ ಸೃಷ್ಟಿಯೆ ಮೊದಲಾದ
ಅಷ್ಟ ಕರ್ತು ಜಗಕೆ ವಿಷ್ಣು ಎಂದೂ
ಗಟ್ಟಿ ಭಕುತಿಯಿಂದ ವಿಟ್ಠಲನ ದಾಸರಲ್ಲಿ
ಇಟ್ಟ ಚಿತ್ತಗೆ ದುರಿತ ಮುಟ್ಟುವವೆ
ಸೃಷ್ಟೇಶ ನಮ್ಮ ಸಿರಿ  ವೇಣುಗೋಪಾಲ ವರ
ಕೊಟ್ಟ ಬಳಿಕ ಕೆಡರು ಅನಂತ ಕಲ್ಪಕ್ಕು ॥ 1 ॥

 ಮಟ್ಟತಾಳ 

ಸಿರಿದೇವಿ ತುತಿಸಲು ಕೇಳಿ ಆತುಮ 
ಸೃಷ್ಟಿಯನು ಮಾಡಿದ
ತರುವಾಯ ಮೊತ್ತಾದಿ ದೇವರಿಗೆ 
ಇತ್ತು ಸೂಕ್ಷ್ಮ ದೇಹ ತೆತ್ತು
ವರಗಳ ತೆಗೆದು ವಿಸ್ತಾರ ಮಾಡಿ ಸ -
ರ್ವೋತ್ತಮ ಸಿರಿಹರಿ ಸೃಜಿಸಿದ ಬ್ರಹ್ಮಾಂಡ
ಹತ್ತು ನಾಲಕು ಲೋಕ ಸಪ್ತಸಾಗರ ಪ -
ರ್ವತ್ತವೆ ಮೊದಲಾದ ಜಡ ಸೃಷ್ಟಿಯನು ಮಾಡಿ
ತೆತ್ತಿಸರ ಸಕಲ ಸ್ಥಳಗಳ ಸೇರಿಸೆ
ಇತ್ತ ಸಕಲ ಜನಕೆ ಸ್ಥೂಲ ದೇಹವನಿತ್ತು
ತತ್ತ ಸ್ಥಾನದಲ್ಲಿ ತಾನು ವ್ಯಾಪಿಸಿ ಸಕಲ
ಕರ್ತೃತ್ವ ಹರಿಯಾಗಿ ಸೃಜಿಸುವ ಸರ್ವರಿಗೆ
ಮಿತ್ರನು ತಾನಾಗಿ ಮನುಜನೊಳಗೆ ನಿಂದು
ಚಿತ್ರ ಪುತ್ರ ಗೃಹಾಮೋದ ಕ್ರಿಯಾ ಪೊತ್ತು
ಪತ್ನಿಗೆ ಸರ್ವ ದ್ವಾರದಿ ಕಾರಣನೋ
ಸತ್ಯಸಂಕಲ್ಪ ಸಿರಿ ವೇಣುಗೋಪಾಲನ್ನ 
ಸತ್ಯ ಸೃಷ್ಟಿಯ ವಿವರವನು ತಿಳಿದವ ಬಲು ಧನ್ಯಾ ॥ 2 ॥

 ರೂಪಕತಾಳ 

ಸಿರಿ ವಿರಿಂಚಿ ಮೊದಲಾದ ತೃಣಾಂತ ಈ
ಗಿರಿ ವನಧಿ ಲೋಕಗಳು ವನಜಜಾಂಡವ
ಹರಿ ತಾನು ವ್ಯಾಪಿಸಿ ಒಬ್ಬರಿಂದ ಒಬ್ಬರ ಪಾಲಿಸುವ
ನರ ನಾಡಿ ನೊಳಗಿದ್ದು ಕುಟುಂಬ ರಕ್ಷಿಸುವ
ಧರೆ ಪತಿಗಳೊಳಗಿದ್ದು ಪೋಷಿಸುವ
ನರ ತಿರಿಯಾದಿ ನಾನಾ ಜೀವರಾಸಿಗೆ ಪರಿ
ಪರಿ ಪರಿಯ ಗ್ರಾಸವ ಸೃಜಿಸಿಟ್ಟು ಅವರವರ
ಅರಿತು ಕಾಲಗಳನ್ನು ಮೀರಗೊಡದೆ ದೇವನು
ಮರಿಯಾಗಿ ಸರುವರನ ಪೊರೆವನು ಭಾರಕರ್ತಾ
ಇರೊದು ಇನ್ನಿದರೊಳು ಬಲು ಪರಿ ವಿಧ
ಅರಿತ ಮಾನವನಿಗೆ ಸರಿಯಿಲ್ಲ ಧರೆಯೊಳು
ಪರಮ ಕಾರುಣಿಕ ಸಿರಿ  ವೇಣುಗೋಪಾಲ ವಿ -
ಸ್ತರ ಮಹಿಮನೆಂದು ಪೊಗಳುವನೆ ಸುಗುಣಾ ॥ 3 ॥

 ತ್ರಿವಿಡಿತಾಳ 

ತನ್ನ ಇಚ್ಛಿಯಲಿಂದ ಜಗವ ಪಾಲಿಸುವ
ತನ್ನ ಇಚ್ಛೆಯಲಿಂದ ಜಗವ ಸೃಜಿಸುವ
ತನ್ನ ಇಚ್ಛೆಯಲಿಂದ ಜಗವ ಕೆಡಿಸುವ ತೆರ -
ವನ್ನು ಕೇಳಿ ಸಕಲ ಸಜ್ಜನರು ಅನಂತ ಜೀವರ
ಮುನ್ನೆ ಕಾರಣಗಳನ್ನು ಮಾಡಿ ಸಂಹರಿಸುವನು
ಇನ್ನು ತತ್ವಗಳನ್ನು ಸೂಕ್ಷ್ಮದಿಂದ
ಬಣ್ಣಾ ಬಣ್ಣಗಳ ಐದಿಸುವ ಹರಿ
ತನ್ನ ಭಕ್ತರಾದ ಅನಂತ ತಾತ್ವಿಕರ
ಚೆನ್ನಾಗಿ ಲಯವ ಐದಿಸುವ ಕಡೆಗೆ
ಇನ್ನಿತು ಸರ್ವರನ ಐದಿಸಿ ಆಮೇಲೆ
ತನ್ನ ಸುತನ ಚರ್ಮವನ್ನೆ ತೆಗೆದು
ಸಣ್ಣರಂತೆ ಶಿರಕೆ ಸುತ್ತಿ ಕುಣಿವನು
ತನ್ನಿತೆ ಸಿರಿ ವ್ಯಾಪಾರಾ ಬಿಡಿಸುವ
ಘನ್ನ ಸಂಸಾರದೊಳಗೆ ಆಗುವ ಲಯ ಕ್ರಿಯಾ
ಅನಂತ ವಿಧಗಳಿಗೆ ಹರಿ ಕಾರಣವೆನ್ನುತ ಸುಖಿಸುವ -
ಗೆನಿತೊ ಸುಖಗಳು ಬಣ್ಣಿಸಲಳವಲ್ಲ ಒಬ್ಬರಿಂದ
ಪನ್ನಗಾದ್ರಿ ನಿವಾಸ ವೇಣುಗೋಪಾಲ ಭವ -
ವನ್ನೆ ದಾಟಿಸುವನು ಈ ವಿವರವನ್ನೇ ತಿಳಿಸಿ ॥ 4 ॥

 ಝಂಪೆತಾಳ 

ಕಾಲಾ ದ್ರವ್ಯಾದಿ ಸುಖ ದುಃಖ ಜೀವೇಶ ವಿ -
ಶಾಲ ಕ್ರಿಯದ ತೊಡರು ಈಡು ವಚನ
ಸೀಲ ದುಸ್ಸೀಲ ಕುಲಾಲ ಕ್ರಿಯಾದಿಗಳು
ಶ್ರೀಲೋಲನಿತ್ತರೆ ಜ್ಞಾನವಾಹದೋ
ಆ ಲಕುಮಿಯೊಳಗೆ ತಾನಿದ್ದು ಪ್ರಳಯಾಂತ
ಕಾಲ ಜ್ಞಾನವ ನಿತ್ತಾದಾರಂಭಿಸಿ
ಬಾಲಕಗೆ ಕ್ಷುಧಿಯಾಗೆ ಬಳಲುವಾ ಮಿತಕ್ಕೆ
ಆ ಲಿಂಗದೇಹದಿ ಮನೆಮಾಡಿ ಜೀವರಿಗೆ
ಕಾಲನಾಮಕ ಹರಿ ಯುಗಪ್ರವೃತ್ತ ಮೇಲು
ಕೆಳಗಾಗದಿರು ಇದರೊಳಗೆ ಇನ್ನು ಬಹು
ಸ್ಥೂಲ ಸೂಕ್ಷ್ಮಗಳು ಉಂಟು ಮತ್ತೆ
ಆಲದೆಲಿಯ ಶಾಯಿ ವೇಣುಗೋಪಾಲ ಶುಭ -
ಆಲಯವ ಸೇರುವಗೆ ಭಕ್ತರಲಿ ತಿಳಿಸುವಾ ॥ 5 ॥

 ಧ್ರುವತಾಳ 

ಸ್ಮೃತಿ ರಹಿತಾದಲಿ ಕರ್ತು ನಾನಹುದಿನ್ನು
ಸತಿ ಪುತ್ರರಿಗೆ ಮಾತ್ರ ದಯ ಮಾಡುವ
ತೃತಿಯಾಕ್ಷವುಳ್ಳ ಸರ್ವ ಜೀವರಿಗೆ
ಮತಿ ತಿರೋಭೂತಾ ಮಾಡಿ ತಿರುಗಿಸುವ
ಕ್ಷಿತಿಯೊಳು ಊಚ ನೀಚ ಜೀವರಲ್ಲಿ ಸ್ಮೃತಿಗೆ
ಖತಿ ಸುಖಗಳು ಕೂಡಾ ನಾವಲ್ಲವೋ
ತೃತಿಯಾಗಳವಲ್ಲ ದಿತಿ ಸುತರು ಮೊದಲಿಲ್ಲ
ಕೃತು ಭುಜರಲ್ಲಾವೈಯ್ಯ ಸ್ವಾತಂತ್ರದಿ
ಪತಿತ ಪಾವನ ವೇಣುಗೋಪಾಲರೇಯಾ -
ದ್ಭುತ ಮಹಿಮನ ಲೀಲೆ ತಿಳಿಯೊ ಭಕ್ತಿಯ ಪಡೆಯೊ ॥ 6 ॥

 ಅಟ್ಟತಾಳ 

ಸಿರಿದೇವಿ ಮೊದಲಾಗಿ ತೃಣಜೀವ ಕಡೆಯಾಗಿ ಬ -
ಹಿರಂತರದಲ್ಲಿ ಪ್ರೇರಕ ನರಹರಿ
ಸರುವರ ಮನ ಮೊದಲಾದ ಇಂದ್ರಿಯಗಳೊಳು
ಬೆರೆತುಕೊಂಡಿಹನು ಹರಿ ತಾನು ಸ್ಥಿರವಕ್ಕು
ಪರಮ ಪುರುಷ ತಾನು ವೊಳಗೆ ನಿಯಾಮಕ
ಹೊರಗೆ ಅಧಿಷ್ಠಾನದಿಂದ ಉಪದೇಶ
ವರಾವರನರಿತು ಮಾಡುತಲಿ ವಿಹರಿಸುವ ವಿ -
ಹರಿಸುವ ನರನ ತಪ್ಪೇನಯ್ಯಾ ಇದರ ಮೇಲೆ ತಿಳಿ -
ದರೆ ಒಂದು ವ್ಯಾಪಾರ ಒಬ್ಬರ ವಶವಲ್ಲ
ಹರಿ ಸ್ವಾತಂತ್ರ ಸಿದ್ಧವೆನಿಸಿಕೊಂಬ
ಗರುವ ದೈವರ ದೇವ ವೇಣುಗೋಪಾಲ ವಿ -
ಸ್ತರ ಮಾಡಿ ತೋರುವ ಮತ್ತು ವಿಚಾರಿಸೆ ॥ 7 ॥

 ಆದಿತಾಳ 

ಖಗರಾಜ ವರದನ್ನ ಜಗದೊಳು ವ್ಯಾಪ್ತನ್ನ
ಅಗಣಿತ ಬಂಧ ಕ್ರಿಯಾ ವಿಗಡ ಮಾಡುವ ತನ್ನ
ಬಗೆ ಬಗೆ ಶಕುತಿಯಿಂದ ಬಾಧೆ ಬಡಿಸುವ
ನಗುವ ನೋಡಿ ತಾನು ಹಗಲಿರುಳೆನ್ನದೆ
ಸಿಗನಯ್ಯಾ ಒಬ್ಬರಿಗೆ ಸಿಲಕಾನು ಸಿಲಕೆ
ಮಿಗೆಲೊಬ್ಬರಾಧೀನದವನಲ್ಲ ದನುಜಾರಿ
ನಿಗಮ ಗೋಚರ  ಸಿರಿ  ವೇಣುಗೋಪಾಲರೇಯಾ ಈ ಬಗೆಯಲ್ಲಿ ಬಂಧಕ ಶಕ್ತನಹುದೊ ತಿಳಿಯಬೇಕು ॥ 8 ॥

 ಜತೆ 

ಸಿರಿ ಮೊದಲಾದ ಚೇತನ ಜಡಗಳ ಮೋಕ್ಷ
ಸಿರಿ ವೇಣುಗೋಪಾಲ ನಾಧೀನ ತಿಳಿದವ ಸುಖಿಯೊ ॥
**********