Showing posts with label ಭಾರತೀಶನೆ ಎನ್ನ ಭವಜನಿತ ದುಃಖ ದೂರ purandara vittala BHAARATEESHANE ENNA BHAVAJANITA DUHKKA DOORA. Show all posts
Showing posts with label ಭಾರತೀಶನೆ ಎನ್ನ ಭವಜನಿತ ದುಃಖ ದೂರ purandara vittala BHAARATEESHANE ENNA BHAVAJANITA DUHKKA DOORA. Show all posts

Monday 6 December 2021

ಭಾರತೀಶನೆ ಎನ್ನ ಭವಜನಿತ ದುಃಖ ದೂರ purandara vittala BHAARATEESHANE ENNA BHAVAJANITA DUHKKA DOORA



ಭಾರತೀಶನೆ ಎನ್ನ ಭವಜನಿತ ದುಃಖ 
ದೂರ ಮಾಡೋ ಶ್ರೀ ಘನ್ನ ಸನ್ನುತವರೇಣ್ಯ ||ಪ||   

ವಾರವಾರಕೆ ಭಜಿಪೆ ನಿನ್ನ ಮುರಾರಿ ವಾರಿಜ ಪದವಿ ಎನಮನ 
ಸೇರಿ ಶಾಂತದಿ ಮುಕುತಿ ಪಥವನು ತೋರಿ ಪೊರೆ ಕರುಣಾಳು ಉತ್ತಮ ||ಅಪ||   

ವಾಯುಸುತ ಹೇ ಧೀರ | ಶ್ರೀ ರಾಮಕಿಂಕರ 
ರಾಯ ಮಹಾದುರ್ಧರ | ಸದ್ಗುಣಗಣಾಂಬುಧಿ 
ಮಾಯದನುಜವಿದಾರ ಸುಚರಿತ್ರ ಶೂರ 
ತೋಯಜಾಂಬಕನಸತಿಯ ಖಳನಾಯಕನು ಕದ್ದೊಯ್ಯೆ ಕಪಟದಿ 
ಜೀಯನೆ ವಾರಿಧಿಯ ಲಂಘಿಸಿ ಕಾಯಜನ ಪಡದಾಕೆಗುಂಗುರ |  
ಈಯುತಲಿ ವನದೊಳಿಹ ಖಳ ನಾಯಕರು ಬಂದ್ಹಿಡಿಯೆ ಅವರ 
ಕಾಯ ಖಂಡಿಸಿ ತಿರುಗಿ ದಶರಥ ಪ್ರಿಯ ರಾಮನಿಗೆ ಸುಕ್ಷೇಮ ತಿಳುಹಿದಿ ||೧||   

ಕುರುಕುಲಾಂಬುಧಿ ಸೋಮ ಎಂದೆನಿಸಿದನೆ ಮಹಾ 
ಗುರು ಪರಾಕ್ರಮ ಭೀಮ | ದ್ರೌಪದಿ ಮನೋಜಯ 
ಕರುಣಾ ವಾರಿಧಿ ಸ್ತೋಮ ರಣರಂಗ ಧಾಮ | 
ದುರುಳ ದುರ್ಯೋಧನನು ನಿಮ್ಮನು ಅರಗಿನ ಮನೆಯಲ್ಲಿ ಪೊಗಿಸಲು 
ಹಿರಿಯ ಧರ್ಮಾದಿಗಳ ಕೈಗೊಂಡ್ಹರುಷದಿಂದಲಿ ತೆರಳಿ ಬಂದು 
ವರಹಿಡಿಂಬಕ ಬಕ ಮುಖಾದ್ಯರ ತರಿದು ಯದುಕುಲ ಜಾತ ಕೃಷ್ಣನ 
ಪರಮ ಕಿಂಕರನಾಗಿ ಸತತದಿ ಮೆರೆವ ಪಾಂಡವ ಜಾತ ಖ್ಯಾತ ||೨|| 

ಮಧ್ಯಗೇಹನೊಳುದಿಸಿ ವರವೀರ ವೈಷ್ಣವ 
ಪದ್ಧತಿಗಳನುಸರಿಸಿ ಮಾಯ್ಗಳ ತ್ರಿಭಾಷ್ಯವ 
ಗೆದ್ದು ಗುರುವೆಂದೆನಿಸಿ ಮಧ್ವಾಖ್ಯನೆನಿಸಿ 
ಸಿದ್ಧ ಮೂರುತಿ ಹರಿಯನುಗ್ರಹ ಬದ್ಧರಾದ ಜನಕೆ ಭೇದವ 
ತಿದ್ದಿ ತಿಳುಹಿದಿ ಮುನಿವರೇಂದ್ರ ಪ್ರಸಿದ್ಧವಾದ ಪರಾಜಿತನೆ ಎ
ನ್ನುದ್ಧರಿಸುತಲಿ ಚಂದದಲಿ ಪ್ರಸಿದ್ಧ ಮೌನಗಿರಿಯಲ್ಲಿ ನಿಂದಿಹ 
ಮಧ್ವಪತಿ ಪುರಂದರ ವಿಠಲ ದೂತ ಮುದ್ದು ಪ್ಲವಗಾದಿಪರಶೇಖರ ||೩||
***

ರಾಗ ಮಧ್ಯಮಾವತಿ. ತ್ರಿಪುಟ ತಾಳ (raga tala may differ in audio)

BAratISane enna Bavajanita duHKa 
dUra mADO SrI Ganna sannutavarENya ||pa||   

vAravArake Bajipe ninna murAri vArija padavi enamana 
sEri SAMtadi mukuti pathavanu tOri pore karuNALu uttama ||apa||   

vAyusuta hE dhIra | SrI rAmakiMkara 
rAya mahAdurdhara | sadguNagaNAMbudhi 
mAyadanujavidAra sucaritra SUra 
tOyajAMbakanasatiya KaLanAyakanu kaddoyye kapaTadi 
jIyane vAridhiya laMGisi kAyajana paDadaakeguMgura |  
Iyutali vanadoLiha KaLa nAyakaru baMd~hiDiye avara 
kAya KaMDisi tirugi daSaratha priya rAmanige sukShEma tiLuhidi ||1||   

kurukulAMbudhi sOma eMdenisidane mahA 
guru parAkrama BIma | draupadi manOjaya 
karuNA vAridhi stOma raNaraMga dhAma | 
duruLa duryOdhananu nimmanu aragina maneyalli pogisalu 
hiriya dharmAdigaLa kaigoMD~haruShadiMdali teraLi baMdu 
varahiDiMbaka baka muKAdyara taridu yadukula jAta kRuShNana 
parama kiMkaranAgi satatadi mereva pAMDava jAta KyAta ||2|| 
  
madhyagEhanoLudisi varavIra vaiShNava 
paddhatigaLanusarisi mAygaLa triBAShyava 
geddu guruveMdenisi madhvAKyanenisi 
siddha mUruti hariyanugraha baddharAda janake BEdava 
tiddi tiLuhidi munivarEMdra prasiddhavAda parAjitane e
nnuddharisutali caMdadali prasiddha maunagiriyalli niMdiha 
madhvapati puraMdara viThala dUta muddu plavagAdiparaSEKara ||3||
***

pallavi

bhAratIshane enna bhavajanita dukkhava dUra mADudi ghanna sannuta varENya

anupallavi

vAravAradi bhajipe ninna murAri vArija padadi ena mana sEri shAntadi mukuti padavanu tOri pore karuNALu uttama

caraNam 1

vAyu suta hE dhIra shrI rAma kinkara rAya mahAdurdhara
sadguNa karuNAmbudhi mAya danuja vidAra sucaritra sUra
tOya jAmbakanA satiya gaLa nAyakanu bndoyye kapaTadi
jIyaneE vAridhiya langhIsi kAyajana paDedAke gungura
Iyulittali vanadoLiha gaLa nAyakaru bandhiDiye avarA
kAya kaNDisi tirugi dasharatha prIyanige su-kSEma tiLuhida

caraNam 2

guru kulAmbudhi sOma endanisidane mahA guru parAkrama bhIma
draupadi manOjaya karuNa vAridhi sOma raNa rangadhAma
dUruLa duryOdanau nimmanu aragina maneyalli pOgisalu
hariya dharmAdigaLa kaikoNDa haruSadindali teraLi bandA
vara hiDimbaka baka mukhAdyara taridu yadukula jAta krSNana
parama kinkaranAgi satatadi mereva pANDava jAta khyAta

caraNam 3

madhya gEhanoLudisi vara vIra vaiSNava paddhatigaL-anusarisi
mAigaLa kubhASyava geddu guruvendenisi madhvAkyanenisi
siddha mUruti hari anugraha baddharAdA janake bhEdava
tiddi tiLuhida munivarEndra prasiddhavAda parAjitane
ennuddharisutali cendadali prasiddha mauni giriyali nindiha
madhvapati purandara viTTala dUta muddu plavagAdhipara shEkhara
***

ಭಾರತೀಶನೆ ಎನ್ನ ಭವಜನಿತ ದುಃಖವ
ದೂರ ಮಾಡುತಿ ಘನ್ನ ಸನ್ನುತವರೇಣ್ಯ ||ಪ||
ವಾರವಾರದಿ ಭಜಿಪೆ ನಿನ್ನ ಮುರಾರಿ ವಾರಿಜ ಪದದಿ ಎನ ಮನ
ಸೇರಿ ಶಾಂತದಿ ಮುಕುತಿ ಪದವನು ತೋರಿ ಪೊರೆ ಕರುಣಾಳು ಉತ್ತಮ ||ಅ||

ವಾಯುಸುತ ಹೇ ಧೀರ ಶ್ರೀ ರಾಮಕಿಂಕರ ರಾಯ ಮಹಾದುರ್ಧರ
ಸದ್ಗುಣ ಕರುಣಾಂಬುಧಿ ಮಾಯ ದನುಜ ವಿದಾರ ಸುಚರಿತ್ರ ಶೂರ
ತೋಯಜಾಂಬಕನಾ ಸತಿಯಳ ಖಳ ಗಾಯಕರು ಬಂದೊಯ್ಯೆ ಕಪಟದಿ
ಜೀಯನೇ ವಾರಿಧಿಯ ಲಂಘಿಸಿ ಕಾಯಜನ ಪಡೆದಾಕೆಗುಂಗುರ
ಈಯಲಿತ್ತಲಿ ವನದೊಳಿಹ ಖಳ ನಾಯಕರು ಬಂದ್ಹಿಡಿಯೆ ಅವರಾ
ಕಾಯ ಖಂಡಿಸಿ ತಿರುಗಿ ದಶರಥ ಪ್ರಿಯನಿಗೆ ಸು-ಕ್ಷೇಮ ತಿಳುಹಿದ ||

ಕುರುಕುಲಾಂಬುಧಿಸೋಮ ಎಂದೆಣಿಸಿದನೆ ಮಹಾಗುರುಪರಾಕ್ರಮ ಭೀಮ
ದ್ರೌಪದಿ ಮನೋಜಯ ಕರುಣವಾರಿಧಿಸೋಮ ರಣರಂಗಧಾಮ
ದುರುಳ ದುರ್ಯೋದನನು ನಿಮ್ಮನು ಅರಗಿನ ಮನೆಯಲ್ಲಿ ಪೊಗಿಸಲು
ಹಿರಿಯ ಧರ್ಮಾದಿಗಳ ಕೈಗೊಂಡ್ಹರುಷದಿಂದಲಿ ತೆರಳಿ ಬಂದ
ವರಹಿಡಿಂಬಕ ಬಕಮುಖಾದ್ಯರ ತರಿದು ಯದುಕುಲಜಾತಕೃಷ್ಣನ
ಪರಮಕಿಂಕರನಾಗಿ ಸತತದಿ ಮೆರೆವ ಪಾಂಡವಜಾತಖ್ಯಾತ ||

ಮಧ್ಯ ಗೇಹನೊಳುದಿಸಿ ವರವೀರವೈಷ್ಣವ ಪದ್ಧತಿಗಳನುಸರಿಸಿ
ಮಾಯ್ಗಳ ಕುಭಾಷ್ಯವ ಗೆದ್ದು ಗುರುವೆಂದೆನಿಸಿ ಮಧ್ವಾಖ್ಯನೆನಿಸಿ
ಸಿದ್ಧ ಮೂರುತಿ ಹರಿಯನುಗ್ರಹ ಬದ್ಧರಾದ ಜನಕೆ ಭೇದವ
ತಿದ್ದಿ ತಿಳುಹಿದ ಮುನಿವರೇಂದ್ರ ಪ್ರಸಿದ್ಧವಾದಾಪರಾಜಿತನೆ ಎ-
ನ್ನುದ್ಧರಿಸುತ ಚೆಂದದಲಿ ಪ್ರಸಿದ್ಧ ಮೌನಿ ಗಿರಿಯಲಿ ನಿಂದಿಹ
ಮಧ್ವಪತಿ ಪುರಂದರವಿಠಲ ದೂತ ಮುದ್ದು ಪ್ಲವಗಾಧಿಪರ ಶೇಖರ ||
*********