..
kruti by ವೀರನಾರಾಯಣ Veeranarayana
ನೀನಲ್ಲದಿನ್ನಾರು ಸಲಹುವರು ಹರಿಯೆ ಪ
ನಾನನ್ಯರನು ಕಾಣೆನೆಲ್ಲಿಯೂ ಕೇಳ್ದರಿಯೆ ಅ.ಪ.
ಪೋರ ಶಶಿಹಾಸನನು ತಂದೆ ತಾಯ್ಸಲುಹಿದರೆಧೀರ ಪ್ರಲ್ಹಾದನನು ತಂದೆ ತಾಯ್ ಸಲುಹಿದರೆವೀರ ಕರ್ಣನ ಹಡೆದ ತಾಯಿ ಸಲುಹಿದಳೆನಾರಿ ದ್ರೌಪದಿಯನ್ನು ಭರ್ತೃಗಳು ಸಲುಹಿದರೆ 1
ಮಡದಿಯನು ಗಜವರನ ಮೊಸಳೆಯಿಂ ಸಲುಹಿದರೆಒಡಹುಟ್ಟಿದರ್ಜುನನ ಕರ್ಣ ತಾ ಸಲುಹಿದನೆಕಡುಗಲಿಯ ವಾಲಿಯನು ಸುಗ್ರೀವ ಸಲುಹಿದನೆಗಡ ಬಬ್ರುವಾಹನನು ತಂದೆಯನು ಸಲುಹಿದನೆ 2
ಪುಸಿಯಲ್ಲದೆಲ್ಲವನು ಸಲಹುವಾತನೆ ನೀನುಪಿಸುಣರೈ ಸಲಹುವರು ತಾವೆಂದು ಗಳಹುವರುಉಸಿರು ಗದುಗಿನ ವೀರನಾರಾಯಣನೆ ನೀನು 3
***