ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ
ಮಾರಮಣನಾಗಾರವೆನಿಪೈಕೂರು
ನರಸಿಂಹಾರ್ಯ ಶೇವಿತಗೆ ಅ.ಪ
ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ
ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ
ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ
ಮಾರುತಾತ್ಮಜಗೆ 1
ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ
ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ
ನಂದಗೋಪನ ಕಂದನೊಲಿಮೆಯ
ಛಂದದಲಿ ಪಡೆದಂಥ ಭೀಮಗೆ 2
ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ
ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ
ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ
ಪಾತ್ರನಿಗೆ 3
****