ಸುಲಭ ಸೇವೆ ನೋಡಿ ಶ್ರೀ ಹರಿಯ ಖುಲ್ಲಮನುಜ ತಾ ನಿಜನೆಲಿನರಿಯ ಪ
ಗುಹ್ಯ ಸೇರಲಿಲ್ಲ ಗುಹ್ಯ ಗುಪ್ತವ 1
ನೀರಮುಣಗಲಿಕ್ಕಿಲ ನಾರಿಯ ಬಿಡಲಿಲ್ಲ ದಾರಿ ತಿಳಿದದ ಬಲ್ಲ ಹರಿಭಕ್ತಿಯ 2
ಶೀಲ ಕೈಗೊಳ್ಳಾಲಕಿಲ್ಲ ಹಲವು ವ್ರತ ಹಿಡಿಯಲಿಲ್ಲ ಮೂಲ ತಿಳಿದವ ಬಲ್ಲ ನೆಲೆನಿಭವ 3
ಮನವುನ್ಮನವಮಾಡಿ ಘನಸುಖದೊಳು ಕೂಡಿ ಜ್ಞಾನವಂದಭ್ಯಾಸಮಾಡಿ ಅನುದಿನದಲಿ 4
ಏನೆಂದರಿಯದ ಮಹಿಪತಿಗೆ ತಾನೆ ತಾನೊಂದು ಜ್ಞಾನ ಭೋಧಿಸಿದ ಗುರು ಸ್ವಾನುಭವದ 5
***