Showing posts with label ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ mahipati. Show all posts
Showing posts with label ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ mahipati. Show all posts

Wednesday 1 September 2021

ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ankita mahipati

 ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಪ  


ನಕ್ರ ಗಜೇಂದ್ರಗೆ ವಕ್ರಾಗಿ ತ್ರಿ ವಿಕ್ರಮನೆಂದಂದು ಮೊರೆ ಇಡಲು ಚಕ್ರದಿಂದಲಿ ನೀ ವಕ್ರನೆ ಹರಿಸಿ ಅಕ್ರದಲೊದಗಿ ಕಾಯ್ದವ ನೀನಹುದೊ 1 

ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ ಭರದಿಂದ ಸ್ಥಂಭದಲುದ್ಭವಿಸಿ ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ ಕರುಣಿಸಿ ಭಕ್ತ ಗೊಲಿದವ ನೀನಹುದೊ 2 

ಸೆರಗಪಿಡಿದು ಸೀರೆ ಸೆಳೆವ ಸಮಯದಲಿ ಹರಿಯೆಂದು ದ್ರೌಪದಿ ಮೊರೆ ಇಡಲು ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ ಧರೆಯೊಳು ಲಜ್ಜೆಗಾಯ್ದವ ನೀನಹುದೊ 3 

ಮಂಡಿಸಿರಲು ಕೌರವ ಅರಗಿನ ಮನೆ ಪಾಂಡವರದರೊಳು ಸಿಲ್ಕಿರಲು ಕಂಡು ನೀ ಅದರೊಳು ವಿವರವ ತೋರಿ ಪೊರವಂಡಿಸಿದ ಪ್ರಚಂಡ ನೀನಹುದೊ 4 

ಎಸೇಸು ಭಕುತರ ಅವರಸಕ್ಕೊದಗುತ ಲೇಸಾಗಿ ಕಾಯ್ದವ ನೀನಹುದೊ ದಾಸ ಮಹಿಪತಿ ಮನದವಸರಕ್ಕೊದಗುತ ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ 5

***