Showing posts with label ವೇಣುವನೂದುತ ನಿಂತಿಹನಾರೆ ಪೇಳಮ್ಮಯ್ಯ sridhara vittala. Show all posts
Showing posts with label ವೇಣುವನೂದುತ ನಿಂತಿಹನಾರೆ ಪೇಳಮ್ಮಯ್ಯ sridhara vittala. Show all posts

Saturday 1 May 2021

ವೇಣುವನೂದುತ ನಿಂತಿಹನಾರೆ ಪೇಳಮ್ಮಯ್ಯ ankita sridhara vittala

ರಾಗ : ರೇಗುಪ್ತಿ ತಾಳ : ಆದಿ 


ವೇಣುವನೂದುತ ನಿಂತಿಹನಾರೆ 

ಪೇಳಮ್ಮಯ್ಯ । ಪಲ್ಲವಿ ।।


ವಾಣೀಧಮವಿಧಿ ಪ್ರಾಣರೊಡೆಯ 

ಸುರಶ್ರೇಣಿ ವಂದ್ಯ ಜಗತ್ರಾಣ 

ಕಾಣಮ್ಮ ।। ಅ ಪ ।।


ವ್ರಜ ಮಧುರಾಪುರಿ ದ್ವಾರಕಿ 

ತ್ಯಜಿಸದನ್ಯಾರೆ ಪೇಳಮಯ್ಯ ।

ರಜತಪೀಠ ಬಿಟ್ಟಿಲ್ಲಿಗೆ 

ಬಂದಿಹನಾರೆ ಪೇಳಮ್ಮಯ್ಯ ।

ದ್ವಿಜ ರಾಮಾರ್ಯರ 

ಭಜನೆಗೊಲಿದು ತನ್ನ ।

ನಿಜಸ್ಥಳ ತೊರೆದ ಸಾಮಾಜ 

ಪೋಷಕನೇ ।। ಚರಣ ।।


ಕಾಮಿನಿಯರು ಎಡಬಲ-

ದೊಳೊಪ್ಪುತಿಹನಾರೆ ಪೇಳಮ್ಮಯ್ಯ ।

ಹೇಮಗರ್ಭ ಪಿತ ಶ್ರೀ-

 ರಾಮಾನುಜನಾರೇ ಪೇಳಮ್ಮಯ್ಯ ।

ಸೋಮಾರ್ಕರಮತ 

ದೀಧಿತಿವಿಲಸಿತನೊಪ್ಪುವ 

ಕಾಣಮ್ಮ ।। ಚರಣ ।\


ಯಾದವ ಕುಲಮಣಿ ಆದಿ 

ಪುರುಷನಿವನಹುದೇನೆ ಪೇಳಮ್ಮಯ್ಯ ।

ವಾದ ಬಳಿಯಲಿ ಸುಬೋಧಕ 

ಕಪಿಯಿಹನಾರೆ ಪೇಳಮಯ್ಯ ।

ಶ್ರೀಧರ ವಿಠಲ ವಿನೋದಿ 

ರಾಮನೆಂದಾದರದಲಿ ಮುಂದಾದ 

ಹನುಮನೇ ।। ಚರಣ ।।

****