ಸೂರ್ಯಾಂತರ್ಗತ ಹರಿ ನಮೋ ನಮೋ
ವೀರ್ಯಾದಿಗಳದಾತ ನಮೋ ನಮೋ ಜಗಬಿಂಬ ಪ
ತೋಯಜಾಕ್ಷನ ವಿಷ್ಣು ನಮೋನಮೋ
ಜೀಯ ಪಾಲಿಸುದೇವ ನಮೋನಮೋ ಮಮಬಿಂಬ ಅ.ಪ
ಆನಂದ ಪರಿಪೂರ್ಣ ನಮೋನಮೋ
ಏನೆಂಬೆ ಪರಮೋಚ್ಚ ನಮೋನಮೋ
ಶ್ರೀನಾಥ ಸಿರಿಪೂರ್ಣ ನಮೋನಮೋ
ಏನೆಂಬೆ ಪರದೋಚ್ಚ ನಮೋನಮೋ
ಶ್ರೀನಾಥ ಸಿರಿಪೂರ್ಣ ನಮೋನಮೋ
ನೀನಾಯಕ ಸ್ವತಂತ್ರ ನಮೋನಮೋ ಜಗಜೂತಿ 1
ನಾಲ್ಕರು ನಿಜರೂಪಿ ನಮೋನಮೋ
ಕಾಲಾದಿಗಳ ನಾಳು ನಮೋನಮೋ
ಏಳೆರಡು ಜಗಪಾಲ ನಮೋನಮೋ
ಪಾಲಾಬ್ದಿಶಯನ ಏಕ ನಮೋ ನಮೋ ಕೇವಲನೆ 2
ಸರ್ವಾಂಗರ್ಬಹಿವ್ಯಾಪ್ತ ನಮೋನಮೋ
ಸರ್ವಾಶ್ರಯನೆಗೋಜ ನಮೋನಮೋ
ದೇವಾದಿದೇವ ವಿಭು ನಮೋನಮೋ
ಸರ್ವೇಂದ್ರಿಯಂಗಳ ಪ್ರೇರಿಸೈ ಋಜುಮಾರ್ಗದಲಿ 3
ಸರ್ವದೋಷವಿದೂರ ನಮೋ ನಮೋ
ಸರ್ವಸುಗುಣ ಪರಿಪೂರ್ಣ ನಮೋನಮೋ
ಜೀವ ಜಗದಿಂದ ಬಿನ್ನ ನಮೋ ನಮೋ
ಶ್ರೀ ವಿಧೀರ ಪರಿಪಾಲ ನಿಸ್ಸೀಮ 4
ಸೃಷ್ಟ್ಯಾದ್ಯಷ್ಠಕರ್ತ ನಮೋನಮೋ
ತುಷ್ಠಿ ಪುಷ್ಠಿಯ ನೀಡು ನಮೋನಮೋ
ಶ್ರೇಷ್ಟ ಶ್ರೀಕೃಷ್ಣ ವಿಠಲ ನಮೋನಮೋ
ದೃಷ್ಠಿ ಬೀರುತ ಬೇಗ ಕಾಣಿಸೈ ತವರೂಪಮೋಕ್ಷದನೆ 5
****