ಪುರಂದರದಾಸರು
ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ ಪ.
ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗಬೇಡಕುಂದು - ನಿಂದೆಗಳ ಪ್ರಯೋಗ ಮಾಡುವರಪ್ರಸಂಗ ಬೇಡ 1
ಆಡಿ ಅಳುಕದ ಅಜಾÕನಿ ಮನುಜರ ಸಂಗಬೇಡಕೂಡಿ ಕುಮಂತ್ರವ ಎಣಿಸುವ ನರರ ಪ್ರಸಂಗ ಬೇಡ 2
ವಿನಯ - ವಿವೇಕವಿಲ್ಲದ ವಿದ್ವಾಂಸರ ಸಂಗಬೇಡತನಗಲ್ಲದಬಂಟ- ನಂಟ - ಮಿತ್ರಾಂಗಳ ಸಂಗಬೇಡ3
ತಮ್ಮ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡನಮ್ಮ ಪುರಂದರವಿಠಲನಿರಲನ್ಯ ಪ್ರಸಂಗ ಬೇಡ 4
********